ನವದೆಹಲಿ: ಇತ್ತೀಚೆಗೆ ಭಾರೀ ಜನಪ್ರಿಯವಾಗಿರುವ ಕ್ಲಬ್ಹೌಸ್ ಆ್ಯಪ್ನಿಂದ ಲಕ್ಷಾಂತರ ಜನರ ಡೇಟಾ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಸೈಬರ್ ಭದ್ರತಾ ತಜ್ಞರೊಬ್ಬರ ಪ್ರಕಾರ ಸುಮಾರು 38 ಲಕ್ಷ ಬಳಕೆದಾರರ ಡೇಟಾ ಲೀಕ್ ಎಂದು ತಿಳಿದು ಬಂದಿದೆ.
ಇನ್ನು, ಕೇವಲ ಕ್ಲಬ್ಹೌಸ್ ಬಳಕೆದಾರರ ಡೇಟಾ ಮಾತ್ರವಲ್ಲ, ಜತೆಗೆ ಇವರ ಫೋನ್ನಲ್ಲಿರುವ ಎಲ್ಲಾ ಕಾಂಟಾಕ್ಟ್ಗಳ ದತ್ತಾಂಶ ಲೀಕ್ ಆಗಿದೆ. ಈ ಡೇಟಾ ಡಾರ್ಕ್ ವೆಬ್ನಲ್ಲಿ ಮಾರಾಟವಾಗುತ್ತಿದೆ ಎಂದು ಆರೋಪಿಸಲಾಗಿದೆ.
ತನ್ನ ವಿರುದ್ಧ ಕೇಳಿ ಬಂದ ಆರೋಪವನ್ನು ಕ್ಲಬ್ಹೌಸ್ ಸಂಪೂರ್ಣವಾಗಿ ತಳ್ಳಿ ಹಾಕಿದೆ. ನಮ್ಮ ಗ್ರಾಹಕರ ರಕ್ಷಣೆ ನಮಗೆ ಮೊದಲ ಆದ್ಯತೆ. ಗ್ರಾಹಕರಿಗೆ ಸಂಬಂಧಿಸಿದ ಯಾವುದೇ ರೀತಿಯ ಡೇಟಾ ನಾವು ಸೋರಿಕೆ ಮಾಡಿಲ್ಲ ಎಂದು ಸಂಸ್ಥೆ ತಿಳಿಸಿದೆ.