ಪುತ್ತೂರು: ಸುಮಾರು 700 ವರ್ಷಗಳ ಇತಿಹಾಸ ಹೊಂದಿದ ದಕ್ಷಿಣ ಕನ್ನಡದ 2ನೇ ಪ್ರಮುಖ ಮಸೀದಿಯೆಂದು ಪ್ರತೀತಿ
ಪಡೆದಿರುವ ಕಲ್ಲೇಗ ಜುಮ್ಮಾ ಮಸೀದಿಯು ಇದೀಗ ನವೀಕೃತಗೊಂಡು ಜು.29 ರಂದು ಉದ್ಘಾಟನೆಗೊಳ್ಳಲಿದೆ. ಬಳಿಕ ಮಸೀದಿಯ ಸಮೀಪ ಯಾತ್ರಿಕ ಮಹಿಳೆಯರಿಗೆ ಹಾಗೂ ಮದ್ರಸ ವಿದ್ಯಾರ್ಥಿನಿಯರಿಗೆ ನಮಾಜ್ ನಿರ್ವಹಿಸಲು ನಿರ್ಮಿಸಿದ ಕಟ್ಟಡದ ಉದ್ಘಾಟನೆಯೂ ನಡೆಯಲಿದೆ.
ಟಿಪ್ಪುಸುಲ್ತಾನ್ ರವರ ಕಾಲದಲ್ಲಿ ಕೊಡಗಿನಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲೆಯ ಮುಸಲ್ಮಾನರ ಆರಾಧನಾ ಕೇಂದ್ರವಾಗಿದ್ದು ಟಿಪ್ಪುಸುಲ್ತಾನರ ಆಡಳಿತ ಅವಧಿಯಲ್ಲಿ ದೀಪ ಉರಿಸಲು ತಸ್ತಿಕ್ ದೊರೆಯುತ್ತಿದ್ದ ಪುರಾವೆಗಳೂ ಇಲ್ಲಿವೆ ಮತ್ತು ಅಲಾಬಿ ಕೊಟ್ಟಿಗೆ ಮತ್ತು ಮೊಹರಂನ್ನು
ಆಚರಿಸುತ್ತಿದ್ದ ಪ್ರತೀಕವಿದೆ.
ಈ ಮಸೀದಿಯಲ್ಲಿ ಪ್ರಾರ್ಥಿಸಿದರೆ ತಕ್ಕುದಾದ ಪ್ರತಿಫಲ ಸಿಗುವುದೆಂಬ ವಿಶ್ವಾಸ ಇಲ್ಲಿನ ಜನರಲ್ಲಿದೆ.ಅನಾದಿ ಕಾಲದಿಂದಲೂ ಈ ಮಸೀದಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಚೆರ್ ಕುಂಞ ತಂಙಳ್ ಉಳ್ಳಾಲ, ಪುತ್ತೂರು ತಂಙಳ್, ಪೋಳ್ಯ ತಂಙಳ್, ಅಬುಲ್ ಅಕ್ರಂ ಉಸ್ತಾದ್,ಇಸ್ಮಾಯಿಲ್ ಫೈಝಿ,ಇಬ್ರಾಹಿಂ ಫೈಝಿ, ಇಬ್ರಾಹಿಂ ದಾರಿಮಿ, ಅಬ್ದುಲ್ ಅಝೀಝ್ ದಾರಿಮಿ, ಮೊಯಿದು ಫೈಝಿ, ಅಬೂಬಕ್ಕರ್ ಸಿದ್ದೀಕ್ ಜಲಾಲಿ,ವಿ.ಕೆ ಅಬ್ದುಲ್ ಖಾದರ್,ಆಸೀಫ್ ಡೀಲ್, ಉಮ್ಮರ್ ಹಾಜಿ ರಾಜ್ ಕಮಲ್,ಮಹಮ್ಮದ್ ಆಲಿ, ಆಶ್ರಫ್ ಹೆಚ್ ಬಿಟಿ ಮಂಗಳೂರು, ಹಂಝತ್ ಖಾನ್ ಪೋಳ್ಯ, ಅಬೂಬಕ್ಕರ್ ವಕ್ಫ್ ಬೋರ್ಡ್ ಮಂಗಳೂರು, ಫಾರೂಕ್ ಹೆಚ್ ಎಮ್ ಟಿಂಬರ್ ದೇರಳಕಟ್ಟೆ,ಕಲ್ಲೇಗ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಗ್ರಿಬ್ ನಮಾಝ್ ಬಳಿಕ ಮಹಿಳೆಯರಿಗೆ ವೀಕ್ಷಣೆಗೆ ( ಸಂದರ್ಶನ ಕ್ಕೆ ) ಅವಕಾಶವಿದೆ ಎಂದು ಕಲ್ಲೇಗ ಜಮಾಅತ್ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.