ಪುತ್ತೂರು: ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪುತ್ತೂರು ಮೂಲದ ವ್ಯಕ್ತಿಯೊಬ್ಬರು ಮುಂಬೈನಲ್ಲಿ ಮೃತರಾಗಿದ್ದಾರೆ ಮೃತರ ಸಂಬಂಧಿಕರು ಸಂಪರ್ಕಿಸಿ ಎಂದು ಫೋಟೋ ಸಹಿತ ಸಂದೇಶ ವೈರಲ್ ಆಗುತ್ತಿದ್ದು, ಇದೀಗ ಮೃತರ ಸಂಬಂಧಿಕರು ಮುಂಬೈ ತೆರಳಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಪುತ್ತೂರಿನ ಕೆಮ್ಮಾಯಿ ಮೂಡಯೂರ್ ನಿವಾಸಿಯಾದಂತಹ ಶಶಿಪೂಜಾರಿ(ಶಿವಪ್ಪ ಪೂಜಾರಿ)(55) ಎಂದು ಗುರುತಿಸಲಾಗಿದೆ.
ಕೆಮ್ಮಾಯಿ ಮೂಡಯೂರ್ ಲಕ್ಷ್ಮಿ ಮತ್ತು ನಾಗಪ್ಪ ಪೂಜಾರಿಯವರ ಪುತ್ರರಾದ ಶಶಿಪೂಜಾರಿಯವರು ಅವಿವಾಹಿತರಾಗಿದ್ದು, ಸುಮಾರು 35 ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿದ್ದರು. ಮುಂಬೈಯ ಬಾಂದ್ರಾ ಪೂರ್ವ(ಈಸ್ಟ್) ನಲ್ಲಿ ಎವರ್ ಗ್ರೀನ್ ಹೋಟೆಲ್ ಬಳಿ ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಅವರ ಮೃತ ದೇಹವನ್ನು ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಪುತ್ತೂರಿನಿಂದ ಕೆಲ ಸಂಬಂಧಿಕರು ಮುಂಬೈಗೆ ತೆರಳಿದ್ದು, ಅಲ್ಲಿನ ಬಿಲ್ಲವ ಸಂಘಗಳ ಸಹಕಾರದೊಂದಿಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಮೃತರು ಒಬ್ಬ ತಮ್ಮ, ನಾಲ್ಕು ತಂಗಿಯರು, ಸಂಬಂಧಿಕರು ಮತ್ತು ಸ್ನೇಹಿತರನ್ನು ಅಗಲಿದ್ದಾರೆ.