ನೆಲ್ಯಾಡಿ : ಮಹಿಳೆಯೋರ್ವರ ಚಪ್ಪಲಿಗಳು ಉದನೆಯ ಗುಂಡ್ಯ ನದಿ ದಡದಲ್ಲಿ ಪತ್ತೆಯಾಗಿದ್ದು ಮಹಿಳೆಯು ನದಿಗೆ ಹಾರಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಕಡಬ ತಾಲೂಕಿಗೆ ಸಮೀಪದ ರೆಖ್ಯಾ ಗ್ರಾಮದ ನೇಲ್ಯಡ್ಕ ಬಳಿಯ ಉರ್ನಡ್ಕ ಸುಂದರ ಗೌಡ ಎಂಬವರ ಪತ್ನಿ ಶಕುಂತಲಾ ಎಂಬವರು ನಾಪತ್ತೆಯಾದ ಮಹಿಳೆ. ಶಕುಂತಲಾ ಅವರು ಬೆಳಗ್ಗೆ ಮನೆಯಿಂದ ಹೊರ ಹೋದವರು ಮನೆಗೆ ಬಾರದೇ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ.
ನಾಪತ್ತೆಯಾದ ಮಹಿಳೆ ಬೆಳಗ್ಗೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತನ್ನ ಹಿರಿಯ ಮಗನಿಗೆ ಕರೆ ಮಾಡಿ ತಮ್ಮನ ಮದುವೆ ಜವಾಬ್ದಾರಿ ನೀನೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು ಎನ್ನಲಾಗಿದೆ. ಇದರಿಂದ ಮಹಿಳೆ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.
ಸ್ಥಳಕ್ಕೆ ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳದವರು ಆಗಮಿಸಿದ್ದು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.