ಕೆಲವರು ತಮಗೆ ಇಷ್ಟವಾದ ದೇವರು ಅಥವಾ ಕುಟುಂಬದ ಸದಸ್ಯರ ಹೆಸರನ್ನು ಅಚ್ಚೆ ಹಾಕಿಸೋದು ನಮಗೆಲ್ಲಾ ಗೊತ್ತೇ ಇದೆ.. ಆದರೇ ಬೆಂಗಳೂರಿನ ವ್ಯಕ್ತಿಯೊಬ್ಬರು ಬಿಜೆಪಿ ರಾಜ್ಯಾಧ್ಯಕ್ಷರ ಚಿತ್ರವನ್ನು ತಮ್ಮ ಕೈಯಲ್ಲಿ ಅಚ್ಚೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸ ರಾಮಕೃಷ್ಣ ಎಂಬವರು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ರವರ ಚಿತ್ರವನ್ನು ಕೈಯಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತಮಗೆ ಅವರ ಮೇಲಿರುವ ಅಪಾರ ಅಭಿಮಾನ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.