ಪುತ್ತೂರು: ಪಡವನ್ನೂರು ಅಂಬಟೆ ಮೂಲೆ ಏರುಕೋಟ್ಯಾ ರಾಮ ನಾಯ್ಕರ ಮನೆಗೆ ಹಾಗೂ ಇತರೆ ನಾಲ್ಕು ಪರಿಶಿಷ್ಟ ಪಂಗಡದ ಮನೆಗೆ ಹೋಗಲು ಸರಿಯಾದ ರಸ್ತೆಯ ವ್ಯವಸ್ಥೆ ಇಲ್ಲ, ರಾಮ ನಾಯ್ಕರ ಕಾಲು ಮುರಿದಿದ್ದು, ಅವರು ನಡೆದಾಡುವ ಪರಿಸ್ಥಿತಿಯಲ್ಲಿಲ್ಲ ಹಾಗೂ ಅವರ ಮಡದಿ ಅನಾರೋಗ್ಯದಿಂದಾಗಿ ಮಲಗಿದಲ್ಲೇ ಇದ್ದಾರೆ ಎನ್ನುವ ಮಾಹಿತಿಯನ್ನು ತಿಳಿದ ದ.ಕ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ತಂಡ ಕೂಡಲೇ ಸ್ಪಂದಿಸಿದ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಅಶೋಕ್ ನಾಯ್ಕ ಕೆದಿಲ ಅವರ ತಂಡ ಮನೆಗೆ ತೆರಳಿದರು.
ಸಮರ್ಪಕವಾದ ರಸ್ತೆ ಮತ್ತು ಅವರ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡು ಅವರಿಗೆ ದಿನ ಬಳಕೆಗೆ ಬೇಕಾದ ಆಹಾರ ಕಿಟ್ ಅನ್ನು ವಿತರಿಸಿದರು.
ರಸ್ತೆ ನಿರ್ಮಾಣಕ್ಕಾಗಿ ರಾಮ ನಾಯ್ಕ್ ರವರ ಪಕ್ಕದ ಜಾಗದವರಲ್ಲಿ ಸೌಹಾರ್ದಯುತ ಮಾತುಕತೆ ನಡೆಸಿ, ಕಾಲುದಾರಿ ಇದ್ದ ಜಾಗದಲ್ಲಿ ರಸ್ತೆ ನಿರ್ಮಿಸಿ ಕೊಡುವಲ್ಲಿ ದಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಯಶಸ್ವಿಯಾಯಿತು.