ಪುತ್ತೂರು: ಪುತ್ತೂರು ವಕೀಲರ ಸಂಘದ ಸದಸ್ಯೆ, ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರ ಕಚೇರಿ ಕಿರಿಯ ಸಹೋದ್ಯೋಗಿ ಜ್ಯೋತ್ಸ್ನಾ ಅವರು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಗೊಂಡಿದ್ದಾರೆ.
ಸುಳ್ಯ ಮರ್ಕಂಜ ದೋಳ ನಿವಾಸಿ ಶಂಕರನಾರಾಯಣ ಶಾಸ್ತ್ರಿ ಮತ್ತು ವಿಜಯಲಕ್ಷ್ಮೀ ಶಾಸ್ತ್ರೀ ದಂಪತಿ ಪುತ್ರಿ ಜ್ಯೋತ್ಸ್ನಾ ಅವರು ಕಾನೂನು ಪದವಿ ಪೂರ್ಣಗೊಳಿಸಿದ ಬಳಿಕ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಹಲವು ಸಮಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಪುತ್ತೂರಿನಲ್ಲಿ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರ ಕಚೇರಿಯಲ್ಲಿ ಕಿರಿಯ ಸಹೋದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕೋವಿಡ್ ಸಂದರ್ಭದಲ್ಲಿ ಕೋರ್ಟು ಕಚೇರಿ ಕೆಲಸಕ್ಕೆ ಬರುವುದು ಅನಾನುಕೂಲವಾದ ಹಿನ್ನೆಲೆಯಲ್ಲಿ ಪ್ರಸ್ತುತ ಮರ್ಕಂಜ ಮನೆಯಲಿದ್ದಾರೆ. ಇದೀಗ ಅವರು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹೈಕೋರ್ಟ್‌ನಲ್ಲಿ ಮೇ 20ಕ್ಕೆ ನಡೆದ ನ್ಯಾಯಾಧೀಶರ ಆಯ್ಕೆ ಸಂದರ್ಶನದಲ್ಲಿ 12 ಮಂದಿ ಆಯ್ಕೆಯಾಗಿದ್ದವರ ಪೈಕಿ ಜ್ಯೋತ್ಸ್ನಾ ಅವರು 2ನೇ ರ್‍ಯಾಂಕ್ ನಲ್ಲಿ ಆಯ್ಕೆಗೊಂಡಿದ್ದಾರೆ.
























