ಪುತ್ತೂರು: 2020-21ನೇ ಸಾಲಿನಲ್ಲಿ ರಾಜ್ಯದ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ರೂ.3 ಲಕ್ಷದ ತನಕ ಅಲ್ಪಾವಧಿ ಕೃಷಿ ಸಾಲ ವಿತರಿಸಲು ನಿಗದಿ ಪಡಿಸಿದ್ದ ಷರತ್ತುಗಳಲ್ಲಿ ಕೆಲವನ್ನು ಹಿಂಪಡೆಯುವಂತೆ ಮಾರ್ಪಡಿಸಿ ರಾಜ್ಯದ ಲಕ್ಷಾಂತರ ರೈತರಿಗೆ ಪ್ರಯೋಜನವಾಗುವಂತೆ ಮಾಡುವ ಮೂಲಕ ಸಹಕಾರಿ ಸಂಘಗಳ ಮನವಿಗೆ ಸ್ಪಂದಿಸಿದ ಶಾಸಕ ಸಂಜೀವ ಮಠಂದೂರು, ಸಹಕಾರಿ ಸಚಿವರಾಗಿದ್ದ ಎಸ್.ಟಿ ಸೋಮಶೇಖರ್ ಹಾಗೂ ತಾಲೂಕು ಸಹಕಾರ ಭಾರತಿ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ರವರಿಗೆ ವಿವಿಧ ಸಹಕಾರಿ ಬ್ಯಾಂಕ್ ಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.
