ಪುತ್ತೂರು: ಕಾಂಗ್ರೆಸ್ ಸರಕಾರ ಇರುವಾಗ ಬಡವರ ಹೊಟ್ಟೆ ತುಂಬಿಸಲು ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಅನ್ನು ಅಲ್ಲಿನ ನೌಕರರಿಗೆ ಸಂಬಳ ಕೊಡದೇ ಅದನ್ನು ಮುಚ್ಚುವ ಪಿತೂರಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವರಾ ಅರೋಪಿಸಿದ್ದಾರೆ. ಇದರ ಜೊತೆಗೆ ತಕ್ಷಣ ನೌಕರರಿಗೆ ವೇತನ ಬಿಡುಗಡೆ ಮಾಡದಿದ್ದರೆ ಕಾರ್ಮಿಕ ಘಟಕದಿಂದ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಸರಕಾರ ಇರುವಾಗ ಮಾಡಿದ ಒಳ್ಳೆಯ ಕಾರ್ಯಕ್ರಮಗಳನ್ನು ಬಿಜೆಪಿ ಸರಕಾರ ನಿಲ್ಲಿಸುತ್ತಾ ಬರುತ್ತಿದೆ. ಈಗಾಗಲೇ ಬಂಟ್ವಾಳದಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಮುಚ್ಚಿಸಲಾಗಿದೆ. ಅದೇ ರೀತಿ ಪುತ್ತೂರಿನಲ್ಲೂ ಕ್ಯಾಂಟೀನ್ ಮುಚ್ಚುವ ಹುನ್ನಾರ ಆಗುತ್ತಿದೆ. ಇಂದಿರಾ ಕ್ಯಾಂಟೀನ್‌ನ ನೌಕರರಿಗೆ ವೇತನ ನೀಡದಿದ್ದರೆ ಪ್ರತಿ ಕ್ಯಾಂಟೀನ್‌ನಲ್ಲಿರುವ ೧೦ಕ್ಕಿಂತ ಹೆಚ್ಚು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಆಗಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ್ ಆಗಿ ಉತ್ತಮ ಕಾರ್ಯ ನಿರ್ವಹಿಸಿದ ನೌಕರರ ಸೇವೆ ಇವತ್ತು ಬಿಜೆಪಿ ಸರಕಾರಕ್ಕೆ ಬೇಡವಾಗಿದೆ. ಇದೇ ಲಾಕ್ ಡೌನ್ ಸಂದರ್ಭದಲ್ಲಿ ಕೇವಲ ೮ ಜನ ಊಟ ಕೊಂಡು ಹೋಗಿದ್ದಾರೆಂದು ತನಿಖೆಗೆ ಆಗ್ರಹಿಸಿದ ಬಿಜೆಪಿ ಸರಕಾರಕ್ಕೆ ಇವತ್ತು ಸಂಬಳ ಕೊಡುವ ತಾಕತ್ತಿಲ್ಲವ ಎಂದು ಸವಾಲು ಹಾಕಿದ ಅವರು ಬಿಜೆಪಿ ಸರಕಾರ ಕೇವಲ ಕುರ್ಚಿಗಾಗಿ ಹೋರಾಟ ಮಾಡುವುದು ಬಡವರ ಅಂಗಡಿಗಳನ್ನು ಧ್ವಂಸ ಮಾಡುವುದು ಮತ್ತು ಮನೆ ಧ್ವಂಸ ಮಾಡುವುದು ಬಿಟ್ಟರೆ ಬೇರೆ ಕೆಲಸ ಇಲ್ಲ ಎಂದು ಹೇಳಿದರು. ತಕ್ಷಣ ಇಂದಿರಾ ಕ್ಯಾಂಟೀನ್‌ನ ನೌಕರರಿಗೆ ಸಂಬಳ ಕೊಡಬೇಕು ಇಲ್ಲವಾದರೆ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

ಕಾರ್ಮಿಕರಿಗೆ ಕಿಟ್ ನೀಡುವಲ್ಲೂ ತಾರತಮ್ಯ:
ಕಾಂಗ್ರೆಸ್ ದ.ಕ ಜಿಲ್ಲಾ ಕಾರ್ಮಿಕ ಘಟಕ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಅವರು ಮಾತನಾಡಿ ಕಾರ್ಮಿಕರಿಗೆ ಕಿಟ್ ನೀಡುವಲ್ಲೂ ರಾಜ್ಯ ಸರಕಾರ ಎಲ್ಲಾ ಹಂತದಲ್ಲೂ ವಿಫಲವಾಗಿದೆ. ಬಿಜೆಪಿ ಕಾರ್ಯಕರ್ತರು, ಶಾಸಕರು ಸೂಚಿಸಿದವರಿಗೆ ಮಾತ್ರ ಸುರಕ್ಷಾ ಕಿಟ್ ನೀಡುವ ಮೂಲಕ ಸರಕಾರ ನೀಡುವ ಯೋಜನೆಯಲ್ಲೂ ತಾರತಮ್ಯ ಮಾಡುತ್ತಿದ್ದಾರೆ. ಕೆಲವೊಂದು ಸಂಘಟನೆಯಲ್ಲಿ ಗುರುತಿಸಿಕೊಂಡ ಸದಸ್ಯರಿಗೆ ಮಾತ್ರ ಕಿಟ್ ವಿತರಣೆ ಮಾಡುತ್ತಿದ್ದಾರೆ. ಅದೇ ರೀತಿ ಕಾರ್ಮಿಕರಿಗೆ ಗುರುತಿನ ಚೀಟಿ ನೋಂದಾವಣೆ ಆನ್‌ಲೈನ್ ಬ್ಲಾಕ್ ವ್ಯವಸ್ಥೇಯನ್ನು ಬ್ಲಾಕ್ ಮಾಡಿಸಿದ್ದಾರೆ. ಗ್ರಾಮ ಮಟ್ಟದಲ್ಲಿ ಕಾರ್ಮಿಕರಿಗೆ ದೃಢೀಕರಣ ಪತ್ರ ಕೊಡುವಲ್ಲಿ ಪಂಚಾಯತ್ ಅಧಿಕಾರಿಗಳು ಮುತುವರ್ಜಿ ವಹಿಸಿತ್ತಿಲ್ಲ. ಒಟ್ಟಿನಲ್ಲಿ ಕಾರ್ಮಿಕರಿಗೆ ಆಗುವ ತಾರತಮ್ಯ ನೀತಿ ಧೋರಣೆಯಲ್ಲಿ ಬಿಜೆಪಿ ನೇರ ಹೊಣೆಯಾಗಿದೆ. ಕಾಂಗ್ರೆಸ್ ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕ ಪದಾಧಿಕಾರಿ ಅವರು ಮಾತನಾಡಿ ಕಾರ್ಮಿಕರ ಮಕ್ಕಳಿಗೆ ಸಿಗುವ ಶಿಕ್ಷಣದ ವ್ಯವಸ್ಥೆಯಲ್ಲಿರುವ ಯೋಜನೆಗೆ ನೊಂದಾವಣೆಯಲ್ಲಿ ತೊಂದರೆ ಆಗುತ್ತಿದೆ ಎಂದು ಅವರು ಹೇಳಿದರು.
