ರಾಜ್ಯದ ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹಾಗೇ ಅಗತ್ಯ ಸೇವೆಗಳಿಗೆ ಅನುಮತಿಯನ್ನೂ ನೀಡಲಾಗಿದೆ. ಯಾವೆಲ್ಲ ಸೇವೆಗಳಿಗೆ ಅನುಮತಿ ನೀಡಲಾಗಿದೆ ಎಂಬುದರ ಮಾಹಿತಿ ಇಲ್ಲಿ ನೀಡಿದ್ದೇವೆ. ಈ ಮಾರ್ಗಸೂಚಿಗಳು ಆಗಸ್ಟ್ 16 ರ ವರೆಗೆ ಅನ್ವಯವಾಗುತ್ತವೆ.
ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರ ಹೋಗಿ
- ತುರ್ತು, ಅಗತ್ಯ ಸೇವೆಗಳಿಗಷ್ಟೇ ಅನುಮತಿ
- ಆಟೋ – ಟ್ಯಾಕ್ಸಿಗೆ ಷರತ್ತುಬದ್ಧ ಅನುಮತಿ
- ಬಸ್ – ರೈಲು – ವಿಮಾನಗಳಿಗೆ ಯಾವುದೇ ನಿರ್ಬಂಧವಿಲ್ಲ
- ನೌಕರರು ಗುರುತು ಚೀಟಿ(ಐಡಿ ಕಾರ್ಡ್) ಹೊಂದಿರಬೇಕು
- ಮಧ್ಯಾಹ್ನ 2 ಗಂಟೆವರೆಗೆ ದಿನಸಿ ಖರೀದಿಸಬಹುದು
- ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅವಕಾಶ
- ಮಧ್ಯಾಹ್ನ 2 ಗಂಟೆವರೆಗೆ ಮದ್ಯ ಪಾರ್ಸೆಲ್ ಗೆ ಅವಕಾಶ
- ಹಾಲು, ಮೀನು, ಮಾಂಸ, ಹಣ್ಣು – ತರಕಾರಿ ಖರೀದಿಗೆ ಮಧ್ಯಾಹ್ನ 2 ವರೆಗೆ ಮಾತ್ರ ಅವಕಾಶ
- ಹೋಮ್ ಡೆಲಿವರಿಗೆ ನಿರ್ಬಂಧವಿಲ್ಲ
- ನ್ಯಾಯಬೆಲೆ ಅಂಗಡಿಗಳು ಮಧ್ಯಾಹ್ನ 2 ಗಂಟೆಗೆ ವರೆಗೆ ಮಾತ್ರ ಓಪನ್
- ವಿಮಾನ ನಿಲ್ದಾಣ, ರೈಲ್ವೇ ಪ್ರಯಾಣಕ್ಕೆ ಅನುಮತಿ – ಪ್ರಯಾಣದ ಟಿಕೆಟ್ ಕಡ್ಡಾಯ
- ರಾಜಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕೃತಿಕ, ಧಾರ್ಮಿಕ ಸಭೆ, ಸಮಾರಂಭ ನಿಷೇಧ
- ಮದುವೆಗೆ ಅವಕಾಶ- 100 ಜನರೊಂದಿಗೆ ನಡೆಸಲು ಅವಕಾಶ
- ಅಂತಿಮ ಸಂಸ್ಕಾರಕ್ಕೆ 20 ಜನರಿಗೆ ಅವಕಾಶ
- ರಾತ್ರಿ 9ರಿಂದ ಬೆಳಗ್ಗೆ 5ರ ತನಕ ನೈಟ್ ಕರ್ಫ್ಯೂ ಜಾರಿ