ಕರ್ನಾಟಕ ರಾಜ್ಯ ಸರಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದಾರೆ.
ಸುಳ್ಯ ಶಾಸಕ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಸ್. ಅಂಗಾರ ಅವರಿಗೆ ಮೀನುಗಾರಿಕಾ ಬಂದರು ಖಾತೆಯ ಜವಾಬ್ದಾರಿ ವಹಿಸಲಾಗಿದ್ದು, ಇದೇ ಮೊದಲ ಬಾರಿಗೆ ಸಚಿವರಾಗಿರುವ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ ಖಾತೆಯ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ. ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ, ಹಿಂದುಳಿದ ವರ್ಗಗಳ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಈ ಬಾರಿ ಸಮಾಜ ಕಲ್ಯಾಣ ಖಾತೆಯ ಜವಾಬ್ದಾರಿ ವಹಿಸಲಾಗಿದೆ.
ಉಳಿದಂತೆ ಎಲ್ಲಾ ಸಚಿವರಿಗೆ ಖಾತೆ ಹಂಚಿಕೆ ಫೈನಲ್ ಆಗಿದ್ದು, ಈ ಕೆಳಗಿನಂತಿವೆ.
ಸಚಿವರು-ಕ್ಷೇತ್ರ-ಖಾತೆ
- ಬಸವರಾಜ ಬೊಮ್ಮಾಯಿ-ಮುಖ್ಯಮಂತ್ರಿ, DPAR, ಹಣಕಾಸು, ಗೃಹ, ಗುಪ್ತಚರ (ಗೃಹ ಖಾತೆಯಿಂದ), ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಹಾಗೂ ಮಿಕ್ಕ ಎಲ್ಲಾ ಖಾತೆಗಳು
- ವಿ ಸೋಮಣ್ಣ- ಗೋವಿಂದರಾಜನಗರ-ವಸತಿ
- ಶಂಕರ್ ಪಾಟೀಲ್ ಮುನೇನಕೊಪ್ಪ-ನವಲಗುಂದ-ಜವಳಿ, ಸಕ್ಕರೆ
- ಜೆ.ಸಿ ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ-ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ
- ಮುರುಗೇಶ್ ನಿರಾಣಿ-ಬೀಳಗಿ- ಬೃಹತ್ ಹಾಗೂ ಮಧ್ಯಮ ಕೈಗಾರಿಕೆ
- ಸಿ. ಸಿ ಪಾಟೀಲ-ನರಗುಂದ-ಲೋಕೋಪಯೋಗಿ
- ಬಿ.ಸಿ ಪಾಟೀಲ್-ಹಿರೇಕೆರೂರು-ಕೃಷಿ
- ಉಮೇಶ್ ಕತ್ತಿ-ಹುಕ್ಕೇರಿ- ಅರಣ್ಯ, ಆಹಾರ, ಪಡಿತರ ವಿತರಣೆ, ಗ್ರಾಹಕ ವ್ಯವಹಾರ
- ಶಶಿಕಲಾ ಜೊಲ್ಲೆ- ನಿಪ್ಪಾಣಿ-ಮುಜರಾಯಿ, ಹಜ್ ಮತ್ತು ವಕ್ಫ್
- ಆರ್ ಅಶೋಕ-ಪದ್ಮನಾಭನಗರ-ಕಂದಾಯ(ಮುಜರಾಯಿ ಹೊರತುಪಡಿಸಿ)
- ಎಸ್ ಟಿ ಸೋಮಶೇಖರ್-ಯಶವಂತಪುರ-ಸಹಕಾರ
- ಡಾ. ಸಿ. ಎನ್ ಅಶ್ವಥ ನಾರಾಯಣ-ಮಲ್ಲೇಶ್ವರ- ಉನ್ನತ ಶಿಕ್ಷಣ, ಐಟಿ-ಬಿಟಿ
- ಆರಗ ಜ್ಞಾನೇಂದ್ರ- ತೀರ್ಥಹಳ್ಳಿ-ಗೃಹ(ಗುಪ್ತಚರ ಹೊರತುಪಡಿಸಿ)
- ಕೆ ಗೋಪಾಲಯ್ಯ-ಮಹಾಲಕ್ಷ್ಮಿ ಲೇಔಟ್-ಅಬಕಾರಿ
- ಡಾ. ಸುಧಾಕರ್-ಚಿಕ್ಕಬಳ್ಳಾಪುರ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
- ಕೆ. ಸಿ ನಾರಾಯಣ ಗೌಡ- ಕೆ. ಆರ್ ಪೇಟೆ-ಕ್ರೀಡೆ, ಯುವಜನ, ಕೌಶಲ್ಯಾಭಿವೃದ್ಧಿ, ರೇಷ್ಮೆ
- ಬೈರತಿ ಬಸವರಾಜ್- ಕೆ. ಆರ್ ಪುರ-ನಗರಾಭಿವೃದ್ಧಿ
18: ಕೆಎಸ್ ಈಶ್ವರಪ್ಪ-ಶಿವಮೊಗ್ಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಗೋವಿಂದ ಕಾರಜೋಳ-ಮುಧೋಳ- ಮಧ್ಯಮ ಹಾಗೂ ಮಧ್ಯಮ ಜಲ ಸಂಪನ್ಮೂಲ
- ಹಾಲಪ್ಪ ಆಚಾರ್- ಯಲಬುರ್ಗಿ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಹಿರಿಯ ನಾಗರಿಕರ ಸಬಲೀಕರಣ
- ಆನಂದ್ ಸಿಂಗ್-ಹೊಸಪೇಟೆ-ಪ್ರವಾಸೋದ್ಯಮ, ಪರಿಸರ
22 ಕೋಟಾ ಶ್ರೀನಿವಾಸ ಪೂಜಾರಿ- ಎಂಎಲ್‌ಸಿ-ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಕಲ್ಯಾಣ
- ಪ್ರಭು ಚೌವಾಣ್- ಔರಾದ್-ಪಶು ಸಂಗೋಪಣೆ
24 ಸುನಿಲ್ ಕುಮಾರ್- ಕಾರ್ಕಳ-ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ
25 ಬಿ. ಸಿ ನಾಗೇಶ್- ತಿಪಟೂರು- ಪ್ರಾಥಮಿಕ ಶಿಕ್ಷಣ ಹಾಗೂ ಸಕಾಲ
- ಎಸ್ ಅಂಗಾರ- ಸುಳ್ಯ-ಬಂದರು, ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ
- ಬಿ ಶ್ರೀರಾಮುಲು-ಮೊಳಕಾಲ್ಮೂರು-ಸಾರಿಗೆ, ಎಸ್ ಟಿ ಅಭಿವೃದ್ಧಿ
- ಶಿವರಾಂ ಹೆಬ್ಬಾರ್- ಯಲ್ಲಾಪುರ-ಕಾರ್ಮಿಕ
- ಮುನಿರತ್ನ- ಆರ್ ಆರ್ ನಗರ-ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ
- ಎಂ. ಟಿ. ಬಿ ನಾಗರಾಜ್-ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ