ಪುತ್ತೂರು: ಪಡುವನ್ನೂರು ಗ್ರಾಮದ ಅಂಬಟೆಮೂಲೆ ಎರುಕೊಟ್ಯ ನಿವಾಸಿ ರಾಮನಾಯ್ಕರವರು ಅನಾರೋಗ್ಯ ಪೀಡಿತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಣ್ಣಿನ ಗೋಡೆಯ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮನೆಯ ಗೋಡೆಯು ಕುಸಿದು ಬಿದ್ದಿದ್ದು, ಮನೆಯು ಕುಸಿದು ಬಿದ್ದುದರಿಂದ ದಿಕ್ಕುತೋಚದೆ ಇರುವಾಗ ಅಶೋಕ್ ರೈ ಅಭಿಮಾನಿ ಬಳಗದವರು ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಗಮನಕ್ಕೆ ತಂದಾಗ ಕೂಡಲೇ ಸ್ಪಂದನೆ ನೀಡಿದ ಅವರು ಮನೆಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ , ಮನೆ ರಿಪೇರಿಯನ್ನು ಎಲ್ಲರ ಸಹಕಾರದೊಂದಿಗೆ ಮಾಡುವ ಮತ್ತು ರಿಪೇರಿ ಮಾಡಿಸಲು ಬೇಕಾದ ಸಾಮಾಗ್ರಿ ನೀಡುವುದಾಗಿ ತಿಳಿಸಿದರು.
ಈ ನಿಟ್ಟಿನಲ್ಲಿ ರಾಮನಾಯ್ಕರ ಬಿದ್ದಿರುವ ಮನೆಯ ಗೋಡೆ ನಿರ್ಮಾಣ ಮಾಡಲು ಸಿಮೆಂಟ್ ಬ್ಲಾಕ್ , ಒಂದು ಲೋಡ್ ಕೆಂಪು ಕಲ್ಲು ಮತ್ತು ಸಿಮೆಂಟ್ ಅನ್ನು ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸರಬರಾಜು ಮಾಡಲಾಯಿತು.