ಕಡಬ: ಆನ್‌ಲೈನ್ ಕ್ಲಾಸ್ ಮೂಲಕ ಮೊಬೈಲ್‌ನಿಂದ ಅರಳಿದ ಪ್ರೇಮ ಅತಿರೇಕಕ್ಕೆ ತಿರುಗಿದ್ದು, 17ರ ಯುವತಿ 24ರ ಯುವಕನ ಜೊತೆ ನಾಪತ್ತೆಯಾಗಿರುವ ಶಂಕೆ ಇದ್ದು, ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ.
ಕಳಾರ ನಿವಾಸಿ ಹದಿನೇಳು ವರ್ಷದ ಯುವತಿಯು ಗುರುವಾರದಂದು ಕಾಲೇಜಿಗೆಂದು ಮನೆಯಿಂದ ತೆರಳಿದವಳು ಸಂಜೆಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ ಆಕೆಯ ಮನೆಯವರು ಯಾವುದೇ
ಸುಳಿವು ಸಿಗದ ಹಿನ್ನೆಲೆಯಲ್ಲಿ ನಿನ್ನೆ ಕಡಬ ಠಾಣೆಗೆ
ದೂರು ನೀಡಿದ್ದಾರೆ.
ಇದೇ ವೇಳೆ ಸ್ಥಳೀಯ ನಿವಾಸಿ 24 ವರ್ಷದ ಹನೀಫ್ ಎಂಬಾತನೂ ನಾಪತ್ತೆಯಾಗಿದ್ದು, ಇಬ್ಬರೂ ಜೊತೆಯಾಗಿ ತೆರಳಿರುವ ಸಂಶಯ ವ್ಯಕ್ತವಾಗಿದೆ. ಇದೀಗ ನಾಪತ್ತೆಯಾದವರ ಪತ್ತೆಗೆ ಕಡಬ ಪೊಲೀಸರು ಬಲೆ ಬೀಸಿದ್ದಾರೆ. ಆನ್‌ಲೈನ್ ತರಗತಿಯ ನೆಪದಲ್ಲಿ ಮೊಬೈಲ್
ಅವಾಂತರದಿಂದ ಇವರು ಇಬ್ಬರೂ ಜೊತೆಯಾಗಿ
ತೆರಳಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.