ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ) ವಿಷ್ಣುನಗರ ಕುಂಡಡ್ಕ, ಇಡ್ಕಿದು ಗ್ರಾಮ ಪಂಚಾಯಿತ್, ಇಡ್ಕಿದು ಸೇವಾ ಸಹಕಾರಿ ಸಂಘದ ಸಹಯೋಗದೊಂದಿಗೆ ನಾಗೇಶ್ ಪಾದೆ ಇವರ ಗದ್ದೆಯ ನೇಜಿ ನೆಡುವ ಕಾರ್ಯಕ್ರಮವೂ ಆ.8 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು, ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಗೋಕುಲ್ ದಾಸ್ ಭಕ್ತ, ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್, ಉಪಾಧ್ಯಕ್ಷರಾದ ಯಶೋದ ಕಂಪ ಹಾಗೂ ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಯುವಕ ವೃಂದದ ಸದಸ್ಯರು, ಊರಿನ ಮಹಿಳೆಯರು ಉಪಸ್ಥಿತರಿದ್ದರು.