ಪುತ್ತೂರು: ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ (ರಿ.) ಪುತ್ತೂರು ಸಹಯೋಗದೊಂದಿದೆ, ಶ್ರೀ ವಿಷ್ಣು ಯುವ ಶಕ್ತಿ ಬಳಗ ಮಜ್ಜಾರಡ್ಕ ವತಿಯಿಂದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮವೂ ಆ.8 ರಂದು ಮಜ್ಜಾರಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಾಗಿ ಸೇವಾ ಪ್ರತಿನಿಧಿ ಆನಂದ ರೈ ಮಠ ಭಾಗವಹಿಸಿದ್ದರು ಹಾಗೂ ಅಧ್ಯಕ್ಷತೆಯನ್ನು ರವಿ ಮಜ್ಜಾರ್ ವಹಿಸಿದ್ದರು. ನೆಹರು ಯುವ ಕೇಂದ್ರ ಮಂಗಳೂರು ಇದರ ಪುತ್ತೂರು ತಾಲೂಕು ಸಂಯೋಜಕಿ ಕು. ಪ್ರಜ್ಞಾ ಕುಲಾಲ್ ಕಾವು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಮಣಿಯಾಣಿ, ಉಷಾ, ರೇಖಾ ರೈ, ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹರೀಶ್ ಕೋಡಿಯಡ್ಕ, ಯೋಗಿಶ್ ಸ್ವಾಮಿನಗರ, ಚೇತನ್ ಮಜ್ಜಾರ್, ಪ್ರತೀಕ್ ಗೋಳ್ತಿಲ,ವಿನೋದ್ ಸ್ವಾಮಿನಗರ, ಲೋಕನಾಥ್, ಅನಿಲ್ ಮಣಿಯಾಣಿ ಜನಾರ್ಧನ, ಆದ್ಯ ಆರ್.ಜೆ, ಭುವನ್ ಮಜ್ಜಾರ್, ಕೃತಿಕ್, ಚಿದಾನಂದ ಸ್ವಾಮಿನಗರ, ಭವಿತ್ ಸ್ವಾಮಿನಗರ, ಜಗದೀಶ್ ಕೋಡಿಯಡ್ಕ, ಸತೀಶ್ ಮಜ್ಜಾರ್, ಶ್ರೇಯಸ್ ಗೋಳ್ತಿಲ, ನವೀನ್ ಪಂಜ, ಹೇಮಚಂದ್ರ, ಮೋಹನ್ ಬಂಗಾರ್ ಗುಡ್ಡೆ, ನವೀನ್, ಶೀನ ಚಕೋರಿ ಸ್ವಾಮಿನಗರ, ರವಿ ಸ್ವಾಮಿ ನಗರ, ಪುರುಷೋತ್ತಮ ಗೋಳ್ತಿಲ, ಸಮಿತ್, ಹೃತಿಕ್, ಗುರುಪ್ರಸಾದ್, ಲೋಕೇಶ್, ಕೇಶವ, ದೀಪಕ್, ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಘಟನೆ ಸದಸ್ಯ ಹರೀಶ್ ಸ್ವಾಮಿನಗರ ಪ್ರಾರ್ಥಿಸಿದರು ಹಾಗೂ ಉದಯ್ ಸ್ವಾಮಿನಗರ ಸ್ವಾಗತಿಸಿದರು. ರಾಜೇಶ್ ಮಯೂರ ಧನ್ಯವಾದ ಅರ್ಪಿಸಿದರು.






























