ಬೆಂಗಳೂರು: ಇತ್ತೀಚೆಗಷ್ಟೇ ಬಿಜೆಪಿಯ ಒಬ್ಬನೇ ಒಬ್ಬ ಕಾರ್ಯಕರ್ತನ ಮೈಮುಟ್ಟಿ ನೋಡಲಿ, ಅದರ ಪರಿಣಾಮವೇ ಬೇರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಕೆ ಎಸ್ ಈಶ್ವರಪ್ಪ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಯಾರೋ ಕುಡುಕ ಸೂ.. ಮಕ್ಳು ಮಾತಾಡ್ತಾರೆ ಎಂದು ಕಾಂಗ್ರೆಸ್‌ನವರ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಾರೆ. ವಿಧಾನಸೌಧದಲ್ಲಿ ಪತ್ರಕರ್ತರು ಬಿಜೆಪಿಯನ್ನು ಕಾಂಗ್ರೆಸ್ ಟೀಕೆ ಮಾಡಿದ ಬಗ್ಗೆ ಪ್ರಶ್ನೆಯೊಂದು ಕೇಳಿದ್ದಾರೆ ಈ ವೇಳೆ ಅವರು ಅವಾಚ್ಯವಾಗಿ ಉತ್ತರಿಸಿದ್ದಾರೆ.
ಈ ಬಗ್ಗೆ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸಚಿವ ಕೆ.ಎಸ್.ಈಶ್ವರಪ್ಪ ಸಿಎಂ ಆಗಲು ಪ್ರಯತ್ನಿಸಿದ್ದರು. ಕೊನೆಗೆ ಡಿಸಿಎಂ ಆಗುವುದಕ್ಕೂ ಆಗಿಲ್ಲ. ಹೀಗಾಗಿ ಸಚಿವ ಕೆ.ಎಸ್.ಈಶ್ವರಪ್ಪಗೆ ಹುಚ್ಚು ಹಿಡಿದಿದೆ. ಆದಷ್ಟು ಬೇಗ ಈಶ್ವರಪ್ಪರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು. ಕೆ.ಎಸ್.ಈಶ್ವರಪ್ಪಗೆ ಆರೋಗ್ಯ ಸಚಿವರು ಚಿಕಿತ್ಸೆ ಕೊಡಿಸಬೇಕು ಎಂದು ಪ್ರತಿಕ್ರಿಯಿಸಿದರು. ಈಶ್ವರಪ್ಪಗೆ ಸಂಸ್ಕೃತಿ, ಜವಬ್ದಾರಿಯೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.