ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಆಗಸ್ಟ್ 15ರಂದು ರಾಜ್ಯ ಮಟ್ಟದ ಆನ್ ಲೈನ್ ರಾಪೀಡೆಕ್ಸ್ ಕಾರ್ಪೊರೇಟ್ ಕ್ವಿಜ್ ಕಾರ್ಯಕ್ರಮವು ನಡೆಯಲಿದೆ.
ಈ ಸ್ಪರ್ಧೆಯಲ್ಲಿ 2021-22 ಶೈಕ್ಷಣಿಕ ವರ್ಷದ 9, 10 ನೇ ತರಗತಿ ಹಾಗೂ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಭಾಗವಹಿಸಬಹುದು.
- ಸ್ಪರ್ಧೆಯು ಆದಿತ್ಯವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಸಂಸ್ಥೆಯು ವಿಜೇತರಿಗೆ 2000/- ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.
- ಒಟ್ಟು 50 ಪ್ರಶ್ನೆಗಳಿದ್ದು, ವಿದ್ಯಾರ್ಥಿಗಳು 10 ನಿಮಿಷದ ಒಳಗೆ ಉತ್ತರಿಸಬೇಕು.
- ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಲು ಈ ಕೆಳಗಿನ ವೆಬ್ ಸೈಟ್ ನಲ್ಲಿ ನೋಂದಾವಣೆ ಮಾಡಬೇಕೆಂದು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ವೆಬ್ಸೈಟ್ www.vpuc.vivekanandaedu.org ಅಥವಾ ಮೊಬೈಲ್ ಸಂಖ್ಯೆ 9483146330 ನ್ನು ಸಂರ್ಪಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.