ಬಂಟ್ವಾಳ: ಹಿಂದು ಜಾಗರಣ ವೇದಿಕೆ – ಪುಣಚ ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮವೂ ವಿಟ್ಲ ಭಗವತೀ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಹಿಂಜಾವೇ ಪ್ರಾಂತ ಪ್ರಮುಖರಾದ ರಾಧಕೃಷ್ಣ ಅಡ್ಯಂತಾಯ ಅವರು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂಜಾವೇ ಪುಣಚ ವಲಯ ಅಧ್ಯಕ್ಷರಾದ ಸುದರ್ಶನ ಆಳ್ವ ವಹಿಸಿದ್ದರು.ಕಾರ್ಯಕ್ರಮದ ವೇದಿಕೆಯಲ್ಲಿ ಹಿಂಜಾವೇ ವಿಟ್ಲ ತಾಲೂಕು ಅಧ್ಯಕ್ಷರಾದ ಗಣೇಶ್ ಕುಮಾರ್ ಕೆದಿಲ ಉಪಸ್ಥಿತರಿದ್ದರು.
ಸ್ವಾಗತ ಮತ್ತು ಧನ್ಯವಾದವನ್ನು ಹಿಂಜಾವೇ ಪುಣಚ ವಲಯ ಪ್ರಧಾನ ಕಾರ್ಯದರ್ಶಿ ಯಶಸ್ ಹೆಗ್ಡೆ ನೆರವೇರಿಸಿದ್ದು, ಕಾರ್ಯಕ್ರಮದ ನಿರೂಪಣೆ ದೀಕ್ಷಿತ್ ಮಾಡಿದರು.ಈ ಸಂದರ್ಭದಲ್ಲಿ ಹಿಂಜಾವೇ ಉಪಾಧ್ಯಕ್ಷರಾದ ರಾಜೇಶ್ ಕರೋಪಾಡಿ, ತಾಲೂಕು ಕಾರ್ಯದರ್ಶಿ ಹರ್ಷ , ಪುಣಚ ವಲಯದ ಪ್ರಮುಖರು ಮತ್ತು ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.