ಬೆಂಗಳೂರು: ಇದೀಗ ಮತ್ತೊಮ್ಮೆ ಜಾಹೀರಾತು ವಿವಾದ ಮುನ್ನಲೆಗೆ ಬಂದಿದೆ. ಬೆಂಗಳೂರಿನ ನಿಯಾಝ್ ಗ್ರೂಫ್ ಆಫ್ ರೆಸ್ಟೋರೆಂಟ್ ವಿವಾದ ಸೃಷ್ಟಿಸಿದೆ.
ಒರ್ವ ಸ್ವಾಮೀಜಿಯ ಪ್ರತಿನಿಧಿಸುವ ಪೋಸ್ಟರ್ ನಲ್ಲಿ ‘ಗುರೂಜಿ ಅಫ್ಟರ್ ಟೆಸ್ಟಿಂಗ್ ನಿಯಾಝ್, ಬಿರಿಯಾನಿ ದೆನಾ ಹೋಗಾ’ ಎಂದು ಬರೆಯಲಾಗಿದೆ. ಈ ಪೋಸ್ಟರ್ ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ.ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ಗೆ ” ನಮ್ಮ ಬಿರಿಯಾನಿ ಎಲ್ಲಾ ಇತರ ಬಿರಿಯಾನಿಗಳಿಗೆ-ಅಹಮ್ ಬ್ರಹ್ಮಾಸ್ಮಿ ” ಎಂದು ಶೀರ್ಷಿಕೆ ನೀಡಲಾಗಿದೆ.
ಈ ಪೋಸ್ಟರ್ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ ಎಂದು ಸಂಘಪರಿವಾರ ಗುಲ್ಲೆಬ್ಬಿಸಿದ ಬೆನ್ನಲ್ಲೇ ನಿಯಾಝ್ ರೆಸ್ಟೋರೆಂಟ್ ಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ಪೋಸ್ಟ್ ವೈರಲಾದ ತಕ್ಷಣ ಹಿಂದು ಸಂಘಟನೆಗಳು, ಹಿಂದು ಸಂಸ್ಕೃತಿ ಮತ್ತು ಆಚಾರಕ್ಕೆ ಅವಮಾನ ಮಾಡಲಾಗಿಯೆಂದು ಆರೋಪಿಸಿದ್ದಾರೆ. ಭದ್ರತೆಯ ಹಿನ್ನಲೆಯಲ್ಲಿ ಹೊಟೇಲ್ ಗಳನ್ನು ಮುಚ್ಚಲಾಗಿದೆ. ಈಗಾಗಲೇ ವಿಎಚ್.ಪಿ ಮತ್ತು ಬಜರಂಗದಳ ಕಾರ್ಯಕರ್ತರು ಪೊಲೀಸ್ ಕಮಿಷನರನ್ನು ಭೇಟಿಯಾಗಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ನಿಯಾಝಿ ಹೊಟೇಲ್ ಆಡಳಿತ ಮಂಡಳಿಯವರು ಪೋಸ್ಟ್ ಡಿಲಿಟ್ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕಾರಣಕ್ಕೆ ಕ್ಷಮೆ ಯಾಚಿಸಿದ್ದಾರೆ.