ಪುತ್ತೂರು: ಕಬಕದಲ್ಲಿ ಸ್ವಾತಂತ್ರ್ಯ ರಥಯಾತ್ರೆಗೆ ಎಸ್.ಡಿ.ಪಿ.ಐ ಕಾರ್ಯಕರ್ತರು ಅಡ್ಡಿ ಪಡಿಸಿದ್ದು, ಅವರ ಮೇಲೆ ದೇಶದ್ರೋಹದ ಕೇಸ್ ದಾಖಲು ಮಾಡಿ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ವತಿಯಿಂದ ಗೃಹ ಸಚಿವರಿಗೆ ಪೋಲಿಸ್ ಇಲಾಖೆಯ ಮೂಲಕ ಮನವಿ ಸಲ್ಲಿಸಲಾಯಿತು.
ಪುತ್ತೂರು ತಾಲೂಕಿನ ಕಬಕದಲ್ಲಿ 75ನೇ ಸ್ವಾತಂತ್ರ್ಯ ಉತ್ಸವದ ಹಿನ್ನೆಲೆ ಸರಕಾರಿ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ರಥಯಾತ್ರೆ ಹೊರಟ್ಟಿದ್ದ ಸಂದರ್ಭದಲ್ಲಿ ರಥಕ್ಕೆ ಅಳವಡಿಸಿದ್ದ ವೀರ ಸಾವರ್ಕರ್ ಭಾವಚಿತ್ರವನ್ನು ತೆರವುಗೊಳಿಸಿ ಮತಾಂಧ ಟಿಪ್ಪುವಿನ ಭಾವಚಿತ್ರವನ್ನು ಅಳವಡಿಸಬೇಕೆಂದು ಎಸ್.ಡಿ.ಪಿ.ಐ ಕಾರ್ಯಕರ್ತರು ಧಿಕ್ಕಾರವನ್ನು ಕೂಗಿ ಅಡ್ಡಿಪಡಿಸಿ ಗಲಾಟೆ ಎಬ್ಬಿಸಿ ದೇಶ ದ್ರೋಹದ ಕೃತ್ಯವನ್ನು ಮಾಡಿದ್ದಾರೆ. ಇಂತಹ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಹಳ ಉಗ್ರವಾಗಿ ಖಂಡಿಸುತ್ತದೆ.
ರಾಷ್ಟ್ರೀಯ ಹಬ್ಬದ ದಿನ ದೇಶಾದ್ಯಂತ ಸಂಭ್ರಮಾಚರಣೆ ಸಂದರ್ಭದಲ್ಲಿ ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿಪಡಿಸುವ ಮೂಲಕ ಈ ಮುಖಾಂತರ ಎಸ್.ಡಿ.ಪಿ.ಐ ಸಂಘಟನೆಯ ಮುಖವಾಡವನ್ನು ಇವತ್ತು ಸ್ವಾತಂತ್ರ್ಯ ದಿನ ಕಳಚಿ ಇದು ರಾಷ್ಟ್ರಭಕ್ತ ಸಂಘಟನೆ ಅಲ್ಲ ಭಯೋತ್ಪಾದಕ ಮತ್ತು ರಾಷ್ಟ್ರ ದ್ರೋಹದ ಸಂಘಟನೆ ಎಂಬುದನ್ನು ಇಡೀ ದೇಶಕ್ಕೆ ತೋರಿಸಿದ್ದಾರೆ ಇಂತಹ ಸಂಘಟನೆಯನ್ನು ಬ್ಯಾನ್ ಮಾಡಬೇಕು ಮತ್ತು ದೇಶ ದ್ರೋಹದ ಅಡಿಯಲ್ಲಿ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ, ಪ್ರಮುಖರಾದ ಜಯರಾಮ್ ನೆಕ್ಕರೆ ಉಪಸ್ಥಿತರಿದ್ದರು.