ಬೆಳ್ತಂಗಡಿ: ಸ್ವತಂತ್ರ ದಿನದಂದು ವಿಶೇಷವಾಗಿ ಆರ್ಥಿಕ ನೆರವು ನೀಡುವ ಮೂಲಕ ಇರುವೈಲ್ ಪಾಣಿಲ ಕಂಬಳ ಅಭಿಮಾನಿಗಳು ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಿದರು.
ಸ್ವಾತಂತ್ರ್ಯ ದಿನದಂದು ಜಾತಿ ಭೇದ ಭಾವ ಮರೆತು ನಾಲ್ಕು ಬಡ ಕುಟುಂಬಕ್ಕೆ ಸಹಾಯ ನೀಡುವ ಮೂಲಕ ಇರುವೈಲ್ ಪಾಣಿಲ ಕಂಬಳ ಅಭಿಮಾನಿಗಳು ಆ ಕುಟುಂಬಕ್ಕೆ ಬೆಳಕಾಗಿದ್ದಾರೆ.
ವೇಣೂರು ತಿಮರಡ್ಕ ನಿವಾಸಿ ರಾಮಚಂದ್ರ ಗೌಡರ ಚಿಕಿತ್ಸೆಗೆ, ವೇಣೂರು ನೈನಾಡ್ ಸಮೀಪದ ಸುಧಾಕರ ಪೂಜಾರಿಯವರ ಚಿಕಿತ್ಸೆಗೆ, ಮೂಡಬಿದ್ರೆ ಸ್ಪೂರ್ತಿ ವಿಶೇಷ ವಿಜೇತ ಮಕ್ಕಳ ಶಾಲೆಗೆ ಮೂಡಬಿದಿರೆಯ ಒಂಟಿಕಟ್ಟೆ ಸಮೀಪದ ಜಯರಾಮ್ ಶೆಟ್ಟಿ ಇವರ ಮಗಳ ವಿದ್ಯಾಬ್ಯಾಸಕ್ಕೆ ನೆರವಾದರು, ನಾಲ್ಕು ಕುಟುಂಬಕ್ಕೆ 67 ಸಾವಿರ ಮೊತ್ತವನ್ನು ಸ್ವಾತಂತ್ರ್ಯ ದಿನದಂದು ನೀಡಲಾಯಿತು.
ಇರುವೈಲ್ ಪಾಣಿಲ ಸತೀಶ್ ಚಂದ್ರ ಪೂಜಾರಿ ಹಾಗೂ ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡರು ಸೇರಿದಂತೆ ರಕ್ಷಿತ್ ಜೈನ್ ನಾರಾವಿ, ಸನತ್ ಅಂಚನ್, ಸಂಪತ್ ಅಂಚನ್, ಕೌಶಿಕ್ ಕೋಟ್ಯಾನ್, ಸುಕೇಶ್ ಅಂಚನ್ ತೋಡಾರ್, ಅಬ್ಧುಲ್ ಸತ್ತರ್ ಒಂಟಿಕಟ್ಟೆ ಅಭಿಷೇಕ್ ದೇವಾಡಿಗ, ಅಕ್ಷೀತ್ ಪೂಜಾರಿ ಎಲಿಂಜೆ, ಸಂತೋಷ್ ಪೂಜಾರಿ ಸಿದ್ದಕಟ್ಟೆ , ರತನ್ ಪೂಜಾರಿ, ಅಭಿ ದೇವಾಡಿಗ, ವಿಜಯ್ ಪೂಜಾರಿ ಮನೆಲ್ , ಸುಜೀತ್ ಪೂಜಾರಿ ಮಾಣಿ ಹಲವರು ಉಪಸ್ಥಿತರಿದ್ದರು.






























