ಸುಳ್ಯ :ಅರಂತೋಡು ಗ್ರಾಮ ಪಂಚಾಯತ್ ನ ತೊಡಿಕಾನ 2 ನೇ ವಾರ್ಡ್ ನಲ್ಲಿ ಚುನಾವಣಾ ಮತಪತ್ರದಲ್ಲಿ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದಾಗ ಪಕ್ಷೇತರ ಅಭ್ಯರ್ಥಿಯಾಗಿರುವ ನನಗೆ ತೊಂದರೆಯಾಗಿದೆ.
ಆದ್ದರಿಂದ ಮೊದಲು ನೀಡಿದ ಮತಪತ್ರದಂತೆ ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಚುನಾವಣೆ ಮುಂದೂಡಬೇಕು ಎಂದು ಒತ್ತಾಯಿಸಿರುವ ತೊಡಿಕಾನದ ಪಕ್ಷೇತರ ಅಭ್ಯರ್ಥಿ ಮಹಮ್ಮದ್ ಹನೀಫ್ ರವರು ಈ ಎಲ್ಲ ಗೊಂದಲಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಅವರು ಹೇಳಿದರು.ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮತಪತ್ರದಲ್ಲಿ ನನ್ನ ಕ್ರಮ ಸಂಖ್ಯೆ 5 ಎಂದು ನಮೂದಿಸಿ ಚುನಾವಣಾಧಿಕಾರಿಗಳು ನೀಡಿದ್ದರುಆದರೆ ನಿನ್ನೆ ದಿನ ಧಿಡೀರ್ ಆಗಿ ನನ್ನ ಕ್ರಮ ಸಂಖ್ಯೆ 3 ಎಂದು ಮಾಡಿದ್ದಾರೆ. ಇದರಿಂದ ಗೊಂದಲ ಉಂಟಾಗಿದೆ. ನಾನು ಒಮ್ಮೆ ಬೆಲೆಟ್ ಪೇಪರ್ ಮಾಡಿ ಪ್ರಚಾರ ಕಾರ್ಯ ನಡೆಸಿದ್ದೇನೆ ಈಗ ಮತ್ತೆ ಬೆಲೆಟ್ ಪೇಪರ್ ಬದಲಾಯಿಸಿ ಫೀಲ್ಡ್ ಹೋಗಲು ಸಮಯ ಸಾಕಾಗುವುದಿಲ್. ಆದ್ದರಿಂದ ಚುನಾವಣೆ ಮುಂದೂಡಬೇಕು. ಅಧಿಕಾರಿಗಳು ಯಾವುದೋ ಕಾಣದ ಕೈಗಳ ಒತ್ತಡದಿಂದ ಈ ರೀತಿ ಮಾಡಿದ್ದಾರೆ ಎಂದು ಹೇಳಿದ ಅವರು, ನಾನು ಚುನಾವಣೆಯನ್ನು ಬಹಿಷ್ಕರಿಸುತ್ತೇನೆ. ನ್ಯಾಯ ಸಿಗದಿದ್ದರೆ ಚುನಾವಣೆ ದಿನ ಪ್ರತಿಭಟನೆ ನಡೆಸುವ ಚಿಂತನೆ ಯೂ ಇದೆ ಎಂದು ಹನೀಫ್ ಹೇಳಿದರು.