ಪುತ್ತೂರು: ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಪುತ್ತೂರಿನ ಸಾಲ್ಮರದಲ್ಲಿ ಆ.12 ರಂದು ರಾತ್ರಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳಾದ ಸಿರಾಜುದ್ದೀನ್,ರೋಶನ್ ಡಿಸೋಜಾ ಗೆ ನ್ಯಾಯಾಲಯವೂ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಆರೋಪಿ ಸಿರಾಜುದ್ದೀನ್ ಪರ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಇನ್ನೋರ್ವ ಆರೋಪಿ ರೋಶನ್ ಡಿಸೋಜ ಪರ ನ್ಯಾಯವಾದಿ ಜಯರಾಮ ರೈ, ಸಂತೋಷ್ ಕುಮಾರ್, ಹೇಮಲತಾ ವಾದಿಸಿದರು.
ಎಪಿಎಂಸಿ ರಸ್ತೆಯ ಸಾಲ್ಮರ ಮೌಂಟನ್ ವ್ಯೂ ಶಾಲೆಗೆ ಹೋಗುವ ತಿರುವು ರಸ್ತೆಯ ಸಮೀಪ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆ ಇದೆ ಎಂಬ ಮಾಹಿತಿ ಪಡೆದು ಹಿಂದೂ ಜಾಗರಣ ವೇದಿಕೆ ಮತ್ತು ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದು. ಪೊಲೀಸರಿಗೆ ಮಾಹಿತಿ ನೀಡಿದ್ದರು.ಪೊಲೀಸರು ಸ್ಥಳಕ್ಕೆ ತೆರಳಿ ಅಕ್ರಮ ದನದ ಮಾಂಸ ಇರುವುದನ್ನು ಖಚಿತ ಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದರು.