ಗ್ರಾಮ ಪಂಚಾಯತ್ ಚುನಾವಣೆಯ ಗಾಳಿ ಎಲ್ಲೆಡೆ ಬೀಸುತ್ತಿದೆ. ಮತದಾನ-ಮತಗಟ್ಟೆಗಳು ಗ್ರಾಮ ಗ್ರಾಮಗಳಲ್ಲಿ ಕಳೆಗಟ್ಟಿದೆ. ಈ ಪ್ರಯುಕ್ತ ಚುನಾವಣಾಧಿಕಾರಿಗಳು ಕೂಡಾ ಅಲ್ಲಲ್ಲಿ ಮತದಾನದ ರೂಪುರೇಷೆಗಳನ್ನು ಕಂಡುಕೊಳ್ಳಲು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ..
ಇದರ ಜೊತೆಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಆಗಿರುವ ಡಾ. ರಾಜೇಂದ್ರ ಕೆ ವಿ ಕೂಡಾ ಮತಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಯಾದ ಡಾ. ರಾಜೇಂದ್ರ ಕೆ ವಿ ಅವರು ಕುರಿಯದ ಪುತ್ತೂರು ಉಪವಿಭಾಗ ಗ್ರಾಮ ಪಂಚಾಯ್ತಿ ಎರಡನೇ ಹಂತದ ಚುನಾವಣಾ ಸ್ಥಳಕ್ಕೆ ಭೇಟಿ ನೀಡಿ ಚುನಾವಣಾ ಕಾರ್ಯವೈಖರಿಯ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಚುನಾವಣಾ ಮತಗಟ್ಟೆಯನ್ನು ಪರಿಶೀಲಿಸಿರುವೆನು..ಈಗಾಗಲೇ 50-60 ಶೇ. ದಷ್ಟು ಮತದಾನ ನಡೆದಿದೆ. ತಹಶೀಲ್ದಾರರು ಹಾಗೂ ತಂಡದವರು ಅತ್ಯುತ್ತಮವಾಗಿ ಎಲ್ಲಾ ವ್ಯವಸ್ಥೆಗಳನ್ನು ನೆರವೇರಿಸಿದ್ದಾರೆ. ಕೋವಿಡ್ ಸಮಸ್ಯೆ ಸಂದರ್ಭದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮತದಾನ ಸರಾಗವಾಗಿ ನಡೆಯುವಲ್ಲಿ ಸಹಕಾರಿಯಾಗಿದೆ. ಜನರು ಉತ್ಸಾಹದಿಂದ ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ನಾಲ್ಕು ತಾಲೂಕುಗಳಲ್ಲಿ ಪರಶೀಲನಾ ಕಾರ್ಯವಿದೆ. ಸದ್ಯ ಈ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ, ಚುನಾವಣೆ ಭರ ಶಾಂತಿಯುತವಾಗಿ ಸಾಗುತ್ತಿದೆ.. ‘ಎಂದು ಮಾಧ್ಯಮದ ಜೊತೆ ಚುನಾವಣಾ ಕುರಿತಂತೆ ವಿಚಾರಗಳನ್ನು ಹಂಚಿಕೊಂಡರು.