ಪುತ್ತೂರು: ಬಜತ್ತೂರು ಗ್ರಾಮದ ಕುಡ್ತಡ್ಕ ನೆಕ್ಕರೆ ನಿವಾಸಿ ಚಂದು ರವರು ಒಂದು ಸಣ್ಣ ಗುಡಿಸಲಿನಲ್ಲಿ ಪತ್ನಿ ಹಾಗೂ ಮೂರು ಸಣ್ಣ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಇವರು ಕಾಲಿನ ಸಮಸ್ಯೆಯಿಂದ ಮೂರು ವರ್ಷದಿಂದ ದುಡಿಯಲು ಅಸಾಧ್ಯವಾಗಿದೆ, ಇವರ ಪತ್ನಿ ಮಕ್ಕಳ ವಿದ್ಯಾಭ್ಯಾಸ ಮತ್ತು ಗಂಡನ ಚಿಕಿತ್ಸೆ ಖರ್ಚು , ಮನೆಯ ಖರ್ಚನ್ನು ಬೀಡಿ ಕಟ್ಟಿ ಹೊಂದಿಸಿಕೊಂಡು ಹೋಗುತ್ತಿದ್ದು. ಇವರು ವಾಸಿಸುತ್ತಿರುವ ಸಣ್ಣ ಮನೆಯು ಬೀಳುವ ಪರಿಸ್ಥಿತಿಯಲ್ಲಿದೆ. ಇವರು ತೀರಾ ಬಡತನದಲ್ಲಿರುವುದರಿಂದ ಆರ್ಥಿಕ ಪರಿಸ್ಥಿತಿಯು ಸರಿಯಾಗಿಲ್ಲದೆ ಹೊಸ ಮನೆಯನ್ನು ಕಟ್ಟಲು ಸಾದ್ಯವಾಗಿಲ್ಲ. ಇವರ ಈ ಪರಿಸ್ಥಿತಿಯನ್ನು ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿದ ಅವರು ಖುದ್ದು ಮನೆಗೆ ಭೇಟಿ ನೀಡಿ. ಸಂಘಟನೆಯ ಸಹಕಾರದೊಂದಿಗೆ ಹೊಸ ಮನೆ ರಚನ ಸಂದರ್ಭದಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಭರವಸೆ ನೀಡಿದಂತೆ ಮನೆ ರಚನೆಗೆ ಒಂದು ಲೋಡ್ ಕೆಂಪು ಕಲ್ಲನ್ನು ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಮೂಲಕ ಒದಗಿಸಿದ್ದಾರೆ. ತೀರಾ ಬಡತನದಲ್ಲಿರುವ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಬೇಕೆಂಬ ಸಂಕಲ್ಪದೊಂದಿಗೆ ಅಲ್ಲಿನ ಸಂಘಟನೆಯ ಕಾರ್ಯಕರ್ತರು ಮನೆ ನಿರ್ಮಾಣ ಮಾಡಲು ಅವಿರತವಾಗಿ ದುಡಿಯುತ್ತಿದ್ದಾರೆ.