ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಮೊಬೈಲ್ ರಿಟೈಲರ್ ಅಸೋಸಿಯೇಶನ್ ಪುತ್ತೂರು ಘಟಕದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೇಪುಳು ಜಂಕ್ಷನ್ ನಲ್ಲಿ ವನಮಹೋತ್ಸವ ನಡೆಸಿದರು. ಪುತ್ತೂರು ನಗರ ಸಭಾ ಸದಸ್ಯ ಕೃಷ್ಣನಗರ ಲೀಲಾವತಿ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸುಂದರ ಕೇಪುಳು, ಮೊಬೈಲ್ ರಿಟೈಲರ್ ಅಸೋಸಿಯೇಶನ್ ಪುತ್ತೂರು ಘಟಕದ ಅಧ್ಯಕ್ಷ ಪ್ರವೀಣ್ ಅಮೈ, ಜಯಪ್ರಕಾಶ್ ತರ್ಷಿಪ್, ಆಸೀಫ್, ಶ್ರೀಕಾಂತ್, ರಿಯಾಜ್, ಅಜೇಯ್ ಪಟೇಲ್, ಸುಧೀರ್, ರಫೀಕ್, ಅಖಿಲ ಭಾರತೀಯ ಮೊಬೈಲ್ ಅಸೋಸಿಯೇಶನ್ ದ. ಕ ಜಿಲ್ಲೆಯ ಉಪಾಧ್ಯಕ್ಷ ಶಶಿರಾಜ್ ರೈ ಉಪಸ್ಥಿತರಿದ್ದರು. ಮಹೇಶ್ ಗೌಡ ಸ್ವಾಗತಿಸಿ, ಶ್ರೀಕಾಂತ್ ವಂದಿಸಿದರು.