ಮಂಗಳೂರು: ರೈಲ್ವೇ ಹಳಿ ದಾಟುತ್ತಿದ್ದ ಮಹಿಳೆಯರಿಬ್ಬರು ಚಲಿಸುತ್ತಿರುವ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದ ಜಪ್ಪು ಮಹಾಕಾಳಿಪಡ್ಪು ಬಳಿಯ ಕುಡ್ಪಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ ಬೀಡಿ ಬ್ರಾಂಚ್ಗೆ ತೆರಳುತ್ತಿದ್ದ ವೇಳೆ ನಾರಾಯಣ ಹಾಗೂ ಜಯಣ್ಣ ಎಂಬುವವರ ಪತ್ನಿಯರಿಬ್ಬರು ಜೊತೆಯಾಗಿ ರೈಲ್ವೇ ಹಳಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.