ಪುತ್ತೂರು: ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸ್ ರವರ ಜನ್ಮದಿನಾಚರಣೆಯನ್ನು ಆ.20 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು.

ದಿ.ರಾಜೀವ್ ಗಾಂಧಿ ಯವರಿಗೆ ನುಡಿ ನಮನವನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭಾಸ್ಕರ ಗೌಡ ಕೋಡಿಂಬಾಳ ರವರು ಸಲ್ಲಿಸಿದರು ಹಾಗೂ ದಿ.ದೇವರಾಜ್ ಅರಸ್ ರವರಿಗೆ ದ.ಕ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ ಶೆಟ್ಟಿ, ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಎಂ.ಬಿ ವಿಶ್ವನಾಥ ರೈ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹರೀಶ್ ಕೋಟ್ಯಾನ್,ಶಕೂರ್ ಹಾಜಿ, ಹರೀಶ್ ಕೋಟ್ಯಾನ್, ಜಯಪ್ರಕಾಶ್ ಬದಿನಾರು, ನಾರಾಯಣ ನಾಯ್ಕ್, ಪ್ರಜ್ವಲ್ ರೈ ತೋಟ್ಲಾ, ಶ್ರವಣ್ ಸಿಕ್ವೆರಾ, ಯಕೂಬ್ ಕುರಿಯ, ವಿಕ್ಟರ್ ಪಾಯಸ್, ಬಾತೀಶ್ ಅಳಕೆಮಜಲು, ಸೀತಾ ಭಟ್, ವಿಶಾಲಾಕ್ಷಿ ಬನ್ನೂರು, ಉಷಾ ಅಂಚನ್, ಶಾರದಾ ಅರಸ್, ಸಚಿನ್ ಸರೋಳಿ,ಯಕೂಬ್ ದರ್ಬೆ, ಮಹಾಬಲ ರೈ, ಎ.ಕೆ ಆಲಿ, ಜಗನ್ಮೋಹನ್, ವಸಂತ ಪಣಂಬು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
