ವಿಟ್ಲ: ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ವಕೀಲನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಆರೋಪಿಯನ್ನು ಉಮ್ಮರ್.ಕೆ ಎಂದು ಗುರುತಿಸಲಾಗಿದೆ.
ಆರೋಪಿ ವಕೀಲ ಉಮ್ಮರ್ ನ ಕಚೇರಿಯಲ್ಲಿ ಯುವತಿ ಟೈಪಿಂಗ್ ಕೆಲಸ ನಿರ್ವಹಿಸುತ್ತಿದ್ದು, ಆ.16 ರಂದು ಸಂಜೆ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಯುವತಿಯ ಮೈ ಮುಟ್ಟಿ, ಹಿಂದಿನಿಂದ ತಬ್ಬಿಕೊಂಡಿದ್ದು, ಯುವತಿ ಗಾಬರಿಯಿಂದ ಆತನನ್ನು ತಳ್ಳಿದ್ದು ಅಷ್ಟೇ ಅಲ್ಲದೇ ಈ ವಿಚಾರವನ್ನು ಮನೆಯಲ್ಲಿ ತಿಳಿಸುವುದಾಗಿ ಹೇಳಿದಾಗ ಆರೋಪಿಯು ನೀನು ಮನೆಯಲ್ಲಿ ಹೇಳಬೇಡ, ಹೇಳಿದರೆ ನಿನ್ನ ಮರ್ಯಾದೆ ಹೋಗುತ್ತದೆ ಎಂದು ಹೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಯುವತಿಯು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಅ. ಕ್ರ 29/2021 ಕಲಂ 354(ಎ), 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಆರೋಪಿಗೆ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ.