Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

    ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

    ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

    ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

    ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

    ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

    ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ

    ಪುತ್ತೂರಿನಲ್ಲಿ ಉದ್ಯೋಗಾವಕಾಶ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಬಳೆ ಕಳವು..!!

    ಬಂಟ್ವಾಳ: ಕಾರು ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ..!!

    ಬಂಟ್ವಾಳ: ಕಾರು ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

‘ಕಟ್ಟೋಣ ಬಾಳಿಗೊಂದು ಸೂರು’ ವಾಟ್ಸಾಪ್ ತಂಡದ ಮೂರನೇ ಯೋಜನೆ:; ವಿಕಲಚೇತನ ತಂಗಿಯೊಂದಿಗೆ ಜೀವನ ನಡೆಸುತ್ತಿರುವ ಬಡ ಮಹಿಳೆಗೆ ಸುಸಜ್ಜಿತ ಮನೆ ನಿರ್ಮಾಣ:; ಆ.22 ರಂದು ಹಸ್ತಾಂತರ

August 21, 2021
in ಮಂಗಳೂರು
0
‘ಕಟ್ಟೋಣ ಬಾಳಿಗೊಂದು ಸೂರು’ ವಾಟ್ಸಾಪ್ ತಂಡದ ಮೂರನೇ ಯೋಜನೆ:; ವಿಕಲಚೇತನ ತಂಗಿಯೊಂದಿಗೆ ಜೀವನ ನಡೆಸುತ್ತಿರುವ ಬಡ ಮಹಿಳೆಗೆ  ಸುಸಜ್ಜಿತ ಮನೆ ನಿರ್ಮಾಣ:; ಆ.22 ರಂದು ಹಸ್ತಾಂತರ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಮಂಗಳೂರು : ವಿಕಲಚೇತನ ತಂಗಿಯೊಂದಿಗೆ ಇಂದೋ ನಾಳೆಯೋ ಕುಸಿದು ಬೀಳುವ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಮಹಿಳೆಯೋರ್ವರಿಗೆ ಕಟ್ಟೋಣ ಬಾಳಿಗೊಂದು ಸೂರು ತಂಡದಿಂದ ಸುಸಜ್ಜಿತ ಮನೆ ಸೇವಾ ನಿಲಯ ನಿರ್ಮಿಸುವ ಮೂಲಕ ಬದುಕಿಗೆ ಭರವಸೆಯ ಬೆಳಕಾಗಿದ್ದಾರೆ. ಆ ಮನೆಯ ಆ.22 ರಂದು ಗೃಹಪ್ರವೇಶ ಮೂಲಕ ಹಸ್ತಾಂತರ ನಡೆಯಲಿದೆ.

Advertisement
Advertisement
Advertisement

ಇದು ದ.ಕ.ದ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಲ್ಲಿ ಈ ತಂಡದಿಂದ ಮಾಡುತ್ತಿರುವ ಮೂರನೇ ಯೋಜನೆಯಾಗಿದೆ. ಮೊದಲ ಯೋಜನೆ ಪಾಲ್ತಾಡಿ ಗ್ರಾಮದ ಸುಂದರಿ ಎಂಬ ಮಹಿಳೆಗೆ ಕೊಟ್ಟಿಗೆ,ಬಾವಿ ಸಹಿತ ಸುಸಜ್ಜಿತ ಮನೆ,ಎರಡನೇ ಯೋಜನೆಯಾಗಿ ಕೋರಿಕ್ಕಾರು ನಿವಾಸಿ ಸೀತಾ ಹುಕ್ರ ಅವರ ಮನೆ ರಿಪೇರಿ,ಇದೀಗ ಮೂರನೇ ಯೋಜನೆಯಾಗಿ ಅಂಗವಿಕಲ ತಂಗಿಯೊಂದಿಗೆ ಜೀವನ ಸಾಗಿಸುತ್ತಿರುವ ಪಾಲ್ತಾಡಿಯ ಮಂಜುನಾಥ ನಗರದ ಗಿರಿಜಾ ರೈ ಅವರಿಗೆ ಸುಸಜ್ಜಿತ ಮನೆ ನಿರ್ಮಾಣ ಕಾರ್ಯ ಮಾಡಿ ಆ.22 ರಂದು ಗೃಹಪ್ರವೇಶದೊಂದಿಗೆ ಹಸ್ತಾಂತರ ನಡೆಯಲಿದೆ.

ಏನಿದು ‘ಕಟ್ಟೋಣ ಬಾಳಿಗೊಂದು ಸೂರು ತಂಡ’:

Advertisement

ಕಳೆದ ಬಾರಿ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸೇವಾ ಭಾರತಿ ತಂಡದವರು ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಸಂಧರ್ಭದಲ್ಲಿ ಸುಂದರಿ ಎಂಬ ವಿಧವೆ ಮಹಿಳೆ ತನ್ನ ವೃದ್ದ ತಂದೆ ಹಾಗೂ ಮೂವರು ಪುಟ್ಟ ಮಕ್ಕಳೊಂದಿಗೆ ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದಾಗ ಅವರಿಗೆ ಮನೆ ನಿರ್ಮಿಸಿಕೊಡುವ ಸಲುವಾಗಿ ದಾನಿಗಳನ್ನು ಹಾಗೂ ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ,ಚೆನ್ನಾವರ ಅಭ್ಯುದಯ ಯುವಕ ಮಂಡಲದವರನ್ನು ಸೇರಿಕೊಂಡು ರಚಿಸಿದ ವ್ಯಾಟ್ಸಾಪ್ ಗ್ರೂಪ್ ಈ ‘ಕಟ್ಟೋಣ ಬಾಳಿಗೊಂದು ಸೂರು ತಂಡ’..

ಕೊರೊನಾ ಸಮಯದಲ್ಲಿ ಎಲ್ಲರೂ ಮನೆಯೊಳಗಿದ್ದು ಆರೋಗ್ಯ ಮತ್ತು ಭವಿಷ್ಯದ ಚಿಂತೆಯಲ್ಲಿದ್ದರೆ ಈ ತಂಡ ಮತ್ತೊಬ್ಬರ ಬದುಕು ಕಟ್ಟುವ ಕೆಲಸ ಮಾಡಿದೆ. ಅವರು ಈ ತಂಡದ ಮೂಲಕ 75,000 ನಗದು ಸಂಗ್ರಹ ಮತ್ತು ದಾನಿಗಳ ನೆರವಿನ ಜೊತೆಗೆ ಶ್ರಮದಾನದ ಮೂಲಕ ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿ ಮಾದರಿಯಾಗಿದ್ದಾರೆ. ಸುಮಾರು 4.5 ಲಕ್ಷ ರೂ.ವೆಚ್ಚದಲ್ಲಿ ಮನೆಯೊಂದನ್ನು ನಿರ್ಮಿಸಿ ಹಸ್ತಾಂತರಿಸಲು ಸಿದ್ಧತೆ ನಡೆಸಿದ್ದಾರೆ. ಈ ತಂಡದಲ್ಲಿ ಸುಮಾರು 75,000 ನಗದು ಸಂಗ್ರಹ,60,000 ವೆಚ್ಚದ ಸಾಮಾಗ್ರಿ ಸಂಗ್ರಹ,ಕಂದಾಯ ಇಲಾಖೆಯ ಮೂಲಕ 50,000 ಹಾಗೂ ಬಂಟರ ಸಂಘದ ಕಾರ್ಯದರ್ಶಿ ರಾಕೇಶ್ ರೈ ಅವರ ನೇತೃತ್ವದಲ್ಲಿ ಬಂಟರ ಸಂಘದ ಸದಸ್ಯರಿಂದ 1,60,000 ನಗದು ಸಂಗ್ರಹ ಮಾಡಲಾಗಿದೆ.

ಸವಣೂರು ಗ್ರಾಮ ಪಂಚಾಯತ್‍ನ ಪಾಲ್ತಾಡಿ ಗ್ರಾಮದ ಮಂಜುನಾಥನಗರ ನಿವಾಸಿ ಗಿರಿಜಾ ರೈ ಅವರು ತನ್ನ ಅಂಗವಿಕಲ ತಂಗಿ ರಾಜೀವಿ ಅವರೊಂದಿಗೆ ವಾಸವಾಗಿದ್ದು,ಮಣ್ಣಿನ ಗೋಡೆಯ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿ ಇದ್ದ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿತ್ತು.ಇದು ಸಂಪೂರ್ಣವಾಗಿ ಧರಶಾಹಿಯಾಗುವ ಹಂತದಲ್ಲಿದ್ದಾಗ ತಂಡದ ಮೂಲಕ ತೆರವು ಮಾಡುವ ಕೆಲಸ ಮಾಡಲಾಯಿತು. ದಾಸ್ತಾನಿನಂತಿರುವ ಸಣ್ಣ ಮನೆ, ಅಡುಗೆ ಕೋಣೆಯಿಂದ ಹಿಡಿದು ಎಲ್ಲವೂ ಅದರಲ್ಲಿಯೇ ನಡೆಯಬೇಕು.ಮಳೆ ಬಂದರೆ ಸೋರುವ ಮೇಲ್ಛಾವಣಿ, ಭದ್ರತೆ ಇಲ್ಲವೇ ಇಲ್ಲ ಇಂತಹ ಅಸಹಾಯಕ ಸ್ಥಿತಿಯಲ್ಲಿಯೇ ಗಿರಿಜಾ ರೈ ಹಾಗೂ ಅವರ ಅಂಗವಿಕಲ ತಂಗಿ ಅವರ ಜೀವನ ಕಳೆಯುತ್ತಿದ್ದರು.

ಈ ಸಂದರ್ಭದಲ್ಲಿ ತಂಡದ ಪ್ರಮುಖರಾದ ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಅವರು ಬೇಟಿ ನೀಡಿ,ನೂತನ ಮನೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ದಾನಿಗಳನ್ನು ಸಂಪರ್ಕಿಸಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲಾಯಿತು.ಇವರಿಗೆ ಬೆಂಬಲವಾಗಿ ಬಂಟರ ಸಂಘದ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು ಸುಮಾರು 1,60,000 ಸಂಗ್ರಹಿಸಿಕೊಟ್ಟಿದ್ದಾರೆ. ಇದೀಗ ಮನೆ ನಿರ್ಮಾಣಗೊಂಡು ಆ.22 ರಂದು ಗೃಹಪ್ರವೇಶ ನಡೆಸಿ ಗಿರಿಜಾ ರೈ ಅವರಿಗೆ ಹಸ್ತಾಂತರ ನಡೆಯಲಿದೆ.

ಇದು ಕೇವಲ ಮನೆಯಲ್ಲ ದೇವಾಲಯ:

ಅಸಹಾಯಕ ಕುಟುಂಬಕ್ಕೆ ಸಹಾಯ ನೀಡುವ ಸಲುವಾಗಿ ಪ್ರಾರಂಭಗೊಂಡ ಕಟ್ಟೋಣ ಬಾಳಿಗೊಂದು ಸೂರು ತಂಡದ ಮೂಲಕ ಕೈಗೊಂಡ ಕಾರ್ಯಗಳು ಯಶಸ್ಸನ್ನು ಕಂಡಿದೆ. ಲಾಕ್‌ಡೌನ್ ಸಂದರ್ಭದ ವಿರಾಮದ ಸಮಯವನ್ನು ಈ ಮನೆಗೋಸ್ಕರ ತಂಡದ ಸದಸ್ಯರು ವಿನಿಯೋಗಿಸಿದ್ದಾರೆ. ಸಂಘ ಸಂಸ್ಥೆಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್, ದಾನಿಗಳ ಸಹಕಾರದಿಂದ ಮೂರನೇ ಯೋಜನೆಯ ಸೇವಾ ನಿಲಯ ನಿರ್ಮಾಣಗೊಂಡಿದೆ. – ಇಂದಿರಾ ಬಿ.ಕೆ , ಮುಂದಾಳು ಕಟ್ಟೋಣ ಬಾಳಿಗೊಂದು ಸೂರು ತಂಡ.

ಸೇವಾ ನಿಲಯಕ್ಕೆ ಪುತ್ತೂರು ತಾಲೂಕು ಬಂಟರ ಸಂಘದ ಮುಖಾಂತರವಾಗಿ ರೂ 1,63,000/-ನ್ನು ದಾನಿಗಳ ಮತ್ತು ಬಂಟರ ಸಂಘದ ಕ್ಷೇಮ ನಿಧಿಯ ಮುಖಾಂತರವಾಗಿ ಆರ್ಥಿಕವಾದ ಸಹಕಾರವನ್ನು ನೀಡಲಾಗಿದೆ.ಗಿರಿಜಾ ರೈ ಮತ್ತು ರಾಜೀವಿ ರೈ ಸಹೋದರಿಯರ ಅಸಹಾಯಕ ಸ್ಥಿತಿಯ ಮತ್ತು ಮನೆಯ ಸ್ಥಿತಿಯ ಬಗ್ಗೆ ವಾಟ್ಸಪ್ ಮೂಲಕ ಸಹಕಾರವನ್ನು ಪಡೆದುಕೊಳ್ಳಲಾಗಿದೆ. ಯಾರನ್ನೂ ಕೂಡ ವೈಯುಕ್ತಿಕವಾಗಿ ಸಂಪರ್ಕ ಮಾಡಿ ಸಂಗ್ರಹ ಮಾಡಿಲ್ಲ , ಮನವಿಯನ್ನು ನೋಡಿ ಸ್ವಯಂಪ್ರೇರಣೆಯಿಂದ ಎಲ್ಲಾ ದಾನಿಗಳು ಸ್ಪಂದನೆ ನೀಡಿದ್ದಾರೆ. ವಿಶೇಷವಾಗಿ ಒಮಾನ್ ಬಂಟರ ಸಂಘದ ಅಧ್ಯಕ್ಷರು, ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ತಲಾ 25000 ನೀಡಿದ್ದಾರೆ.

ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿಶ್ವ ಸಂತೋಷ ಸ್ವಾಮೀಜಿಯವರು ವಾಟ್ಸಾಪ್ ಮುಖಾಂತರವಾಗಿ ವಿಚಾರವನ್ನು ತಿಳಿದು ಮಠದ ವತಿಯಿಂದ ಹತ್ತು ಸಾವಿರ ರೂಪಾಯಿಯನ್ನು ಕಳಿಸಿಕೊಟ್ಟಿದ್ದಾರೆ.ಹೀಗೆಯೇ ಹಲವಾರು ಸಹೃದಯಿ ದಾನಿಗಳು ನೇರ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಿದ್ದಾರೆ. ಅವರೆಲ್ಲರಿಗೂ ಸಂಘದ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು , ಬಹಳ ಪ್ರಾಮುಖ್ಯವಾಗಿ ಸ್ಥಳೀಯವಾಗಿ ಕಟ್ಟೋಣ ಬಾಳಿಗೊಂದು ಸೂರು ತಂಡದ ಸದಸ್ಯರು, ಯುವ ಸಂಸ್ಥೆಗಳು ಸ್ಥಳೀಯವಾಗಿ ಶ್ರಮದಾನದ ಮುಖಾಂತರವಾಗಿ ಮನೆ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ‌. ಅಲ್ಲದೆ ಸ್ಥಳೀಯವಾಗಿ ಕೂಡ ಹಲವಾರು ದಾನಿಗಳು ಅಧಿಕಾರಿಗಳು ಸಹಕಾರವನ್ನು ನೀಡಿರುವಂತಹ ದು ಉಲ್ಲೇಖನೀಯ. ಪುತ್ತೂರು ತಾಲೂಕು ಬಂಟರ ಸಂಘದ ಮೂಲಕವಾಗಿ ಕೂಡ ಕೋವಿಡ್ ನ ಒಂದನೇ ಅಲೆಯ ಸಂದರ್ಭದಲ್ಲಿ ಸುಮಾರು ರೂ ಐದು ಲಕ್ಷಕ್ಕಿಂತ ಮೌಲ್ಯದ ಧನಸಂಗ್ರಹ ಸಹೃದಯಿಗಳಿಂದ ಆಗಿದ್ದು ಆ ಮೂಲಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಕಿಟ್ಟನ್ನು ವಿತರಿಸಲಾಗಿತ್ತು ಈ ವರ್ಷ ಕೂಡ ಇದೇ ತರ ಇನ್ನೂ ಎರಡು ಮನೆಗಳ ನಿರ್ಮಾಣ ಬಂಟರ ಸಂಘದ ಸಹಕಾರದ ಮುಖಾಂತರವಾಗಿ ನಡೆದಿದೆ. ಅಲ್ಲದೆ ಕೋವಿಡ್ ನಿಯಮಗಳಿಗೆ ಅನುಸಾರವಾಗಿ ಯಾವುದೇ ವೇದಿಕೆಯ ಕಾರ್ಯಕ್ರಮಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಲಿಕ್ಕೆ ಅವಕಾಶ ಇಲ್ಲದ ಕಾರಣ ಪ್ರಮುಖವಾಗಿ ಸೇವಾ ಚಟುವಟಿಕೆಗಳನ್ನು ಮಾಡಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಬಂಟರ ಸಂಘದ ಕ್ಷೇಮ ನಿಧಿಯ , ಹಾಗೂ ದಾನಿಗಳ ಮೂಲಕವಾಗಿ ಮನೆ ನಿರ್ಮಾಣಕ್ಕಾಗಿ ರೂ 6 ಲಕ್ಷಕ್ಕೂ ಮಿಕ್ಕಿದ ಧನಸಹಾಯ ನೀಡಲಾಗಿದೆ , ಹೆಣ್ಣು ಮಕ್ಕಳ ಮದುವೆಗೆ ಸುಮಾರು ರೂ. 12 ಲಕ್ಷಕ್ಕೂ ಮಿಕ್ಕಿದ ಸಹಕಾರವನ್ನು ನೀಡಲಾಗಿದೆ.ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು ರೂ 8 ಲಕ್ಷಕ್ಕೂ ಮಿಕ್ಕಿದ ಸಹಕಾರವನ್ನು ನೀಡಲಾಗಿದೆ.ಆರ್ಥಿಕ ಸಂಕಷ್ಟದ ವಿದ್ಯಾರ್ಥಿಗಳ ವೈದ್ಯಕೀಯ, ಇಂಜಿನಿಯರಿಂಗ್ ವ್ಯಾಸಂಗ ವ ಮತ್ತು ವಿದ್ಯಾರ್ಥಿ ವೇತನಕ್ಕಾಗಿ ಸುಮಾರು 12 ಲಕ್ಷಕ್ಕೂ ಮಿಕ್ಕಿದ ಧನಸಹಾಯವನ್ನು ನೀಡಲಾಗಿದೆ. ಈಸಂದರ್ಭದಲ್ಲಿ ಸಹಕರಿಸಿದ ಸಹೃದಯಿಗಳಿಗೆ ಸಂಘದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.- ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿ, ಬಂಟರ ಸಂಘ ಪುತ್ತೂರು

Advertisement
Advertisement
Advertisement
Previous Post

ವಿಟ್ಲ: ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಗೆ ವಕೀಲನಿಂದ ಲೈಂಗಿಕ ದೌರ್ಜನ್ಯ:; ಆರೋಪಿ ಉಮ್ಮರ್ ವಿರುದ್ಧ ಪ್ರಕರಣ ದಾಖಲು

Next Post

(ಆ.27) ಅಡ್ಯನಡ್ಕ: ಇಂಡಿಯನ್ ಆಯಿಲ್ ‘ಕಾಡು ಫ್ಯೂಲ್ಸ್’ ಪೆಟ್ರೋಲ್ ಪಂಪ್ ಶುಭಾರಂಭ

OtherNews

ಮಂಗಳೂರು: ದೋಣಿ ಮಗುಚಿ ಇಬ್ಬರು ಯುವಕರ ದುರ್ಮರಣ .!!
ಕ್ರೈಮ್

ಮಂಗಳೂರು: ದೋಣಿ ಮಗುಚಿ ಇಬ್ಬರು ಯುವಕರ ದುರ್ಮರಣ .!!

April 2, 2026
ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತ ಬಂಧನ..!
ಕ್ರೈಮ್

ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತ ಬಂಧನ..!

March 31, 2026
ಮೂಡುಬಿದಿರೆ: ಭೀಕರ ರಸ್ತೆ ಅಪಘಾತ; ತಾಯಿ-ಮಗ ಸಾವು..!!
ಕ್ರೈಮ್

ಮೂಡುಬಿದಿರೆ: ಭೀಕರ ರಸ್ತೆ ಅಪಘಾತ; ತಾಯಿ-ಮಗ ಸಾವು..!!

March 31, 2026
ದೇವಸ್ಥಾನ ಹುಂಡಿ ಕಳವು ಪ್ರಕರಣ: ಅಂತಾರಾಜ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು..!!
ಕ್ರೈಮ್

ದೇವಸ್ಥಾನ ಹುಂಡಿ ಕಳವು ಪ್ರಕರಣ: ಅಂತಾರಾಜ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು..!!

March 31, 2026
ಮಂಗಳೂರು : 12ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ..!!
ಕ್ರೈಮ್

ಮಂಗಳೂರು : 12ನೇ ಮಹಡಿಯಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ..!!

March 31, 2026
ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು..!!
ಕ್ರೈಮ್

ಟ್ಯಾಂಕರ್‌ಗೆ ದ್ವಿಚಕ್ರ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು..!!

March 30, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

April 4, 2026
ಪುತ್ತೂರಿನಲ್ಲಿ “ಮಕ್ಕಳ ಕಲರವ” ಉಚಿತ ಸಂಸ್ಕಾರ ಬೇಸಿಗೆ ಶಿಬಿರಕ್ಕೆ ಚಾಲನೆ..!

ಪುತ್ತೂರಿನಲ್ಲಿ “ಮಕ್ಕಳ ಕಲರವ” ಉಚಿತ ಸಂಸ್ಕಾರ ಬೇಸಿಗೆ ಶಿಬಿರಕ್ಕೆ ಚಾಲನೆ..!

April 4, 2026
ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

April 3, 2026
ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

April 2, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page