ಡಿ. 29ರಂದು ಚಿಕ್ಕಮಗಳೂರಿನ ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿ ಉತ್ಸವಕ್ಕೆ ಪೂರ್ವಭಾವಿಯಾಗಿ ದತ್ತಮಾಲಾಧಾರಿಗಳಿಂದ ಪುತ್ತೂರು ನಗರದ ದರ್ಬೆ ವೃತ್ತದಿಂದ ಮಹಾಲಿಂಗೇಶ್ವರ ದೇವಾಲಯ ತನಕ ಸಂಕಿರ್ತನೆ ಮೆರವಣಿಗೆಯು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಪ್ರಖಂಡದ ವತಿಯಿಂದ ನಡೆಯಿತು
.ಈ ಸಂದರ್ಭದಲ್ಲಿ ಕಳೆದ 23 ವರ್ಷಗಳಿಂದಲೂ ದತ್ತಮಾಲಾಧಾರಿಗಳಾಗಿ ಭಕ್ತಿಯಿಂದ ಚಂದ್ರದ್ರೋಣ ಪರ್ವತದತ್ತ ಪಯಣ ಬೆಳೆಸುವ ಹಿಂದೂ ಬಾಂಧವರು ದತ್ತಪೀಠಕ್ಕೆ ದಿನನಿತ್ಯದ ಪೂಜೆ ಸಲ್ಲಿಸುವ ಅವಕಾಶ ಬೇಕಾಗಿದೆ, ಈ ಮೂಲಕ ಸ್ವಾಮಿಗೆ ಅರ್ಚಕರನ್ನು ನೇಮಕ ಮಾಡಿ ಪೂಜೆಗೈಯುವ ಕಾರ್ಯ ನಡೆಸಲು ಅನುಮತಿಯನ್ನು ಕೇಳಿ ಮುಂಬರುವ ದಿನಗಳಲ್ಲಿ ಈ ಕೆಲಸದ ಬಗ್ಗೆಯೂ ಚಿಂತನೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಜನಾರ್ಧನ್ ಬೆಟ್ಟ ಹೇಳಿದರು.
ಈ ಕಾರ್ಯಕ್ರಮದಲ್ಲಿ ದತ್ತಮಾಲಧಾರಿಗಳು ಹಾಗೂ ಘಟಕಗಳ ಜವಾಬ್ದಾರಿಯುತ ಕಾರ್ಯಕರ್ತರು ಕೇಸರಿ ಪಂಚೆ ಹಾಗೂ ಶಾಲು ಧರಿಸಿ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.