ಪುತ್ತೂರು: ನೆಹರು ಯುವಕೇಂದ್ರ ಮಂಗಳೂರು ಮತ್ತು ತಾಲೂಕು ಯುವಜನ ಒಕ್ಕೂಟ ಇವರ ಆಶಯದಂತೆ ಶ್ರೀರಾಮ ಗೆಳೆಯರ ಬಳಗದ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮವೂ ಆ.22 ರಂದು ನರಿಮೊಗರಿನಲ್ಲಿ ನಡೆಯಿತು.
ನರಿಮೊಗರಿನಿಂದ ಹೊರಟ ಈ ಮ್ಯಾರಥಾನ್ ಓಟಕ್ಕೆ ನೆಹರು ಯುವಕೇಂದ್ರದ ಗೌತಮ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ, ಅಶೋಕ್ ಪುತ್ತಿಲ, ಪದ್ಮನಾಭ ಸೇರಿದಂತೆ ಯುವಕರು ಭಾಗವಹಿಸಿದ್ದರು.






























