ಉಪ್ಪಿನಂಗಡಿಯ ಹಳೇಗೇಟು ಬಳಿ ಮೀನು ವ್ಯಾಪಾರ ನಡೆಸುತ್ತಿದ್ದ ಅಂಗಡಿಗೆ ಆ.22ರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿ ಸುಟ್ಟಿರುವ ಘಟನೆ ವರದಿಯಾಗಿದ್ದು, ಘಟನಾ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು. ಡಿವೈಎಸ್ ಪಿಗೆ ಘಟನಾ ಸ್ಥಳದಿಂದಲೇ ಕರೆ ಮಾಡಿದ ಶಾಸಕರು ಶೀಘ್ರವಾಗಿ ತನಿಖೆ ನಡೆಸಿ ಘಟನೆಯ ಹಿಂದಿರುವ ಆರೋಪಿಗಳನ್ನು ಬಂಧನ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಶೋಕ್ ಶೆಟ್ಟಿ ಎಂಬವರು ಟೆಂಟ್ ಮಾದರಿಯ ಅಂಗಡಿಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದು ಆ ಮೀನಿನ ಅಂಗಡಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅಂಗಡಿ ಸಂಪೂರ್ಣವಾಗಿ ಭಸ್ಮವಾಗಿದೆ.
ಇವರ ಸಹೋದರ ಮೋಹನದಾಸ್ ಶೆಟ್ಟಿ ವಿಶ್ವ ಹಿಂದೂ ಪರಿಷತ್ತಿನ ಉಪ್ಪಿನಂಗಡಿ ವಲಯದ ಪ್ರಮುಖರಾಗಿದ್ದರೆ.
ಘಟನಾ ಸ್ಥಳದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದಾರೆ.