ಉಪ್ಪಿನಂಗಡಿ: ಹಳೇಗೇಟು ಬಳಿ ಮೀನು ವ್ಯಾಪಾರ ನಡೆಸುತ್ತಿದ್ದ ಅಂಗಡಿಗೆ ಆ.22ರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿ ಸುಟ್ಟಿರುವ ಘಟನೆ ವರದಿಯಾಗಿದ್ದು, ಘಟನಾ ಸ್ಥಳಕ್ಕೆ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ ಭೇಟಿ ನೀಡಿ ಹಿಂದೂ ಯುವಕನ ಅಂಗಡಿಗೆ ಬೆಂಕಿ ಕೊಟ್ಟ ದುಷ್ಕೃತ್ಯವನ್ನು ಖಂಡಿಸಿ ಬೆಂಕಿ ಯಾರೇ ಹಚ್ಚಿರಲಿ ಅವರನ್ನು ಶೀಘ್ರವಾಗಿ ಬಂಧಿಸಿಬೆಕೇಂದು ಆಗ್ರಹಿಸಿದರು. ಹಾಗೂ ತುರ್ತಾಗಿ ನೂತನ ಅಂಗಡಿ ಪ್ರಾರಂಭ ಮಾಡಲು ಬೇಕಾಗುವ ವ್ಯವಸ್ಥೆ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ಬಜರಂಗದಳ ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು,ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಕಾರ್ಯದರ್ಶಿ ಪ್ರಸಾದ್ ಪಚ್ಚಾಡಿ,ಬಜರಂಗದಳದ ಪ್ರಮುಖರಾದ ರವಿನಂದನ್ ನೆಟ್ಟಿಬೈಲು,ಕಿಶನ್ ಕಾಂಚನ,ಜಯಂತ್ ಕುಂಜೂರುಪಂಜ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.