ಪುತ್ತೂರು: ಪಾಪ್ಯುಲರ್ ಪ್ರಂಟ್ ಬ್ಲಡ್ ಡೋನರ್ಸ್ ಫಾರಂ ನರಿಮೊಗರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೆಎಂಸಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆ.22 ರಂದು ಪುರುಷರಕಟ್ಟೆ ಮದ್ರಸದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಪ್ರಂಟ್ ಬ್ಲಡ್ ಡೋನರ್ಸ್ ಫಾರಂ ನರಿಮೊಗರು ಇದರ ಅಧ್ಯಕ್ಷ ಅಬ್ದುಲ್ ಸಾಲಿಂ ವಹಿಸಿದ್ದರು. ಪಾಪ್ಯುಲರ್ ಪ್ರಂಟ್ ಬ್ಲಡ್ ಡೋನರ್ಸ್ ಫಾರಂನ ನಿರ್ವಾಹಕರಾದ ಅಶ್ರಫ್ ಬಾವ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಶಾಫಿ ಮುಕ್ವೆ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಉಮ್ಮರ್ ಫಾರೂಕ್ ಅರ್ಷದಿ ದುವಾ ನೆರವೇರಿಸಿದರು. ಕೆಎಂಸಿ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ. ಆಕಾಶ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ನೂತನ ಪದಾಧಿಕಾರಿಗಳ ಪದಗ್ರಹಣವೂ ಈ ಸಂದರ್ಭದಲ್ಲಿ ನಡೆಯಿತು. ಅಧ್ಯಕ್ಷರಾಗಿ ಅಬ್ದುಲ್ ಸಾಲಿಮ್, ಉಪಾಧ್ಯಕ್ಷರಾಗಿ ಸುಹೈಲ್ ಬಡಕ್ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಾಹಿರ್, ಜಚೆ ಕಾರ್ಯದರ್ಶಿಯಾಗಿ ಶಾಕಿರ್, ಕೋಶಾಧಿಕಾರಿಯಾಗಿ ಗಫರ್ ನೇಮಕಗೊಂಡರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ pfi ರಾಜ್ಯ ಸಮಿತಿ ಸದಸ್ಯ ಶರೀಫ್ ಕೊಡಾಜೆ, ಜಾಬಿರ್ ಅರಿಯಡ್ಕ, ಮುಕ್ವೆ RJM ಅಧ್ಯಕ್ಷ ಅಬ್ದುಲ್ಲಾ ಹಾಜಿ ಮೈಸೂರು,HIM ಪುರುಷಕಟ್ಟೆ ಅಧ್ಯಕ್ಷ ಇಬ್ರಾಹಿಂ ಗನ್ನಿ, ಅಬೂಬಕ್ಕರ್ ಕೆ.ಮಾಯಾಂಗಳ, ಇಬ್ರಾಹಿಂ ಪಾಪೆತ್ತಡ್ಕ,ಪಾಪ್ಯುಲರ್ ಪ್ರಂಟ್ ಬ್ಲಡ್ ಡೋನರ್ಸ್ ಫಾರಂ ನರಿಮೊಗರು ಇದರ ಗೌರವಾಧ್ಯಕ್ಷ ಅಶ್ರಪ್ ಮರಕೂರು, ಫಾರೂಕ್ ಸಾಹೇಬ್,ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಬಾಳಾಯ,ಯೂಸೂಫ್ ಹಾಜಿ ಅಳಕೆ,ದ. ಕ ಸುನ್ನಿ ಸೆಂಟರ್ ಸಂಸ್ಥಾಪಕ ಜೈನುದ್ದಿನ್ ಹಾಜಿ ಮುಕ್ವೆ , ಸಹರಾ ಅರ್ಥ್ ಮೂವರ್ಸ್ ಮಾಲಕ ಹಾಜಿ ಜಮಾಲುದ್ದೀನ್,ಮಹಮ್ಮದ್ ರಾಶಿಕ್,ಎಂ. ಎಸ್ ರಫೀಕ್,ಸಲೀಂ ಪಾಪು, ಎಸ್.ಡಿ.ಪಿ.ಐ ನರಿಮೊಗರು ವಲಯ ಅಧ್ಯಕ್ಷ ಸಲೀಂ ಮಯಾಂಗಳ,ಹಾಜಿ ಇಬ್ರಾಹಿಂ ಸಾಗರ್,ಅಬ್ದುಲ್ ಹಮೀದ್ ಕರ್ಗಲು ಉಪಸ್ಥಿತರಿದ್ದರು.





























