ಪುತ್ತೂರು: ಸ್ವಿಫ್ಟ್ ಕಾರು ಮತ್ತು ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ಆ.26 ರಂದು ಪುತ್ತೂರಿನ ಕೃಷ್ಣನಗರ ಬನ್ನೂರು ಚರ್ಚ್ ನ ಮುಂಭಾಗದಲ್ಲಿ ನಡೆದಿದೆ.
ಕಾರು ಹಿಂಬದಿಯಿಂದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ರಿಕ್ಷಾ ಪಲ್ಟಿ ಹೊಡೆದ ಕಾರಣ ರಿಕ್ಷಾ ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.