ಕೊಕ್ಕಡ: ಸೇವಾಭಾರತಿ ಸಂಸ್ಥೆಯ ಹಿತೈಷಿ ಹಾಗೂ ಸ್ವಯಂಸೇವಕರಾದ ಸಚಿನ್ ಕುಮಾರ್. ಎಚ್ ಕಲ್ಮಂಜ, ತಮ್ಮ 25ನೇ ಹುಟ್ಟುಹಬ್ಬವನ್ನು ಸೇವಾಧಾಮ, ಬೆನ್ನುಮೂಳೆ ಮುರಿತಕ್ಕೊಳಗದವರಿಗಾಗಿನ ಪುನಶ್ಚೇತನ ಕೇಂದ್ರ, ಸೌತಡ್ಕದಲ್ಲಿ ನಿವಾಸಿಗಳಿಗೆ ಹಣ್ಣುಹಂಪಲುಗಳನ್ನು ನೀಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಇಂದಿನ ಯುವಪೀಳಿಗೆ ವಿಶಿಷ್ಟ ರೀತಿಯಲ್ಲಿ, ದಿವ್ಯಾಂಗರ ಜೊತೆ ಹುಟ್ಟುಹಬ್ಬದ ಆಚರಣೆ ಮಾಡುವುದು ಇತರರಿಗೂ ಮಾದರಿ ಎಂದು ಸಂಸ್ಥೆಯ ಪ್ರಬಂಧಕರಾದ ಮೋಹನ್.ಎಸ್ ಅಭಿಪ್ರಾಯ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಚಿನ್ ಸಹೋದರ ಪುನೀತ್ ಎಚ್, ಸಂಸ್ಥೆಯ ಅಕೌಂಟೆಂಟ್ ಕು.ಪೃಥ್ವಿ.ಕೆ, ಸನಿವಾಸಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.



























