ಮಂಗಳೂರು: ನಕಲಿ ಕೋವಿಡ್ ನೆಗೆಟಿವ್ ವರದಿ ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸಿದ ಕೇರಳದ 7 ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೇರಳದ ಆದಿಲ್, ಹನಿನ್, ಇಸ್ಮಾಯಿಲ್ ಮತ್ತು ಅಬ್ದುಲ್ ತಮೀಮ್ ಸೇರಿದಂತೆ ಒಟ್ಟು 7 ಮಂದಿ ಬಂಧಿತ ಆರೋಪಿಗಳು.
ಕೇರಳದಲ್ಲಿ ಕೊರೊನಾ ಮಹಾಮಾರಿ ಹಾವಳಿ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಕೇರಳದಿಂದ ರಾಜ್ಯ ಪ್ರವೇಶಿಸುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.
ನಿನ್ನೆ ಹಾಗೂ ಇಂದು ಮುಂಜಾನೆ ಮಂಗಳೂರು ಹೊರವಲಯದ ತಲಪಾಡಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಕೇರಳ ಮೂಲದ ನಾಲ್ವರು, ಮೊಬೈಲ್ ಎಡಿಟ್ ಮಾಡಿದ್ದ ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸಿದ್ದಾರೆ.
ಈ ವೇಳೆ ಎಚ್ಚೆತ್ತುಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ,ಎಪಿಡಮಿಕ್ ಆಕ್ಟ್ ವಂಚನೆ ಪೊರ್ಜರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅರ್ ಟಿಪಿಸಿಅರ್ ಪರೀಕ್ಷೆ ಮಾದರಿಯಲ್ಲೇ ನಕಲಿ ಪ್ರಮಾಣ ಪತ್ರ ಮಾಡಿಕೊಂಡು ಇವರು ಕರ್ನಾಟಕ ಪ್ರವೇಶ ಮಾಡಿದ್ದರು.ತಲಪಾಡಿ ಗಡಿಯಲ್ಲಿ ವರದಿ ಪರಿಶೀಲನೆ ನಡೆಸಿದಾಗ ನಕಲಿ ರಿಪೊಟ್೯ ಕಂಡು ಬಂದಿದೆ.