ಪುತ್ತೂರು: ತಾಲಿಬಾನ್ ಉಗ್ರರ ಕೈಯಲ್ಲಿರುವ ಕಾಬೂಲ್ ನಲ್ಲಿ ಸಾವು ನೋವು ಗಳನ್ನೂ ಕಂಡಿರುವ ಸಾವಿರಾರು ಮಂದಿ ಇದ್ದಾರೆ ತಮ್ಮವರನ್ನು ಜೀವಂತವಾಗಿ ಕಾಣಲು ಸಾವಿರಾರು ಕುಟುಂಬಗಳು ಹಾತೊರೆಯುತ್ತಿದೆ ಈ ಎಲ್ಲಾ ಬೆಳವಣಿಗೆಯ ಮಧ್ಯೆ ಪುತ್ತೂರಿನ ತೆಂಕಿಲ ನೂಜಿ ನಿವಾಸಿ ಮೆಲ್ವಿನ್ ಪಾಯಸ್ (34) ರವರು ಆ.29 ರಂದು ಸುರಕ್ಷಿತವಾಗಿ ಹುಟ್ಟೂರಿಗೆ ಬಂದಿಳಿದಿದ್ದಾರೆ.
ಮೆಲ್ವಿನ್ ರವರು 11 ವರ್ಷದಿಂದ ಕಾಬೂಲ್ ನಲ್ಲಿ ಕೆಲಸದಲ್ಲಿದ್ದರು. ಮಿಲಿಟರಿ ಆಧಾರಿತ ಕುಕ್ಕಿಂಗ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಆ.26 ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿ ವೇಳೆ ಇವರು ಕಾಬೂಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಆ. 27 ರಂದು ಕಾಬೂಲ್ ನಿಂದ ಅಮೆರಿಕನ್ ಎಂಬಾಸಿಡರ್ ವಿಮಾನದ ಮೂಲಕ ದುಬೈಗೆ ಬಂದು ಆ.28 ರಂದು ದುಬೈನಿಂದ ಹೊರಟು ಸುರಕ್ಷಿತವಾಗಿ ಆ.29 ಕ್ಕೆ ಹುಟ್ಟೂರಿಗೆ ಬಂದಿಳಿದ್ದಾರೆ.


























