ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಮೂಡಾಯೂರು ಆರಿಗೋ ಪೆರ್ಮಂಡ ಗರೋಡಿಯಲ್ಲಿ ಮೂಡಾಯೂರುಗುತ್ತು ಕುಟುಂಬದವರ ನೇತೃತ್ವದಲ್ಲಿ ಶ್ರೀ ಬೈದೇರುಗಳ ನೇಮವು ಡಿ. 26 ರಿಂದ ಡಿ. 29ರವರೆಗೆ ಅದ್ದೂರಿಯಾಗಿ ನಡೆಯಿತು.
ಡಿ. 26 ರಂದು ಪೆರ್ಮಂಡ ಗರೋಡಿಯಲ್ಲಿ ಹೋಮ, ಸ್ಥಳ ಶುದ್ಧೀಕರಣ, ಡಿ. 27ರಂದು ಶ್ರೀ ಮಹಾ ವಿಷ್ಣು ಮೂರ್ತಿ ದೇವರಿಗೆ ರಂಗಪೂಜೆ ಮತ್ತು ಮೂಡಾಯೂರು ಗುತ್ತಿನಿಂದ ದೈವದ ಭಂಡಾರ ತೆಗೆದು ಬಳಿಕ ಬೈದೇರುಗಳ ತಂಬಿಲ ಸೇವೆ ನಡೆಯಿತು.ಡಿ. 28ರಂದು ಇಷ್ಟದೇವತೆ ಮತ್ತು ಎಳ್ನಾಡು ದೈವಗಳ ನೇಮ, ಡಿ. 29 ರಂದು ಶ್ರೀ ಬೈದೇರುಗಳ ನೇಮ, ಗರಡಿ ಇಳಿದ ನಂತರ ಮಾಣಿ ಬಾಲೆ ನೇಮ, ಕಡ್ಸಲೆ ಬಲಿ ಹಾಗೂ ಇತರ ಕಾರ್ಯಕ್ರಮಗಳು ದೈವೀಶಾಸ್ತ್ರದಲ್ಲಿ ನಡೆದು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಮೂಡಾಯೂರು ಗುತ್ತು ಕುಟುಂಬದ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು ಹಾಗೂ ಡಾ. ಎಂ. ಅಶೋಕ್ ಪಡಿವಾಳ್ ಮೂಡಾಯೂರು ಗುತ್ತು ಸೇರಿ ಹಲವಾರು ಗಣ್ಯರು, ಪದಾಧಿಕಾರಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರಗಳು – ಶ್ರೀರಾಮ್ photography