ಪುತ್ತೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಕಾಶ್ ನರ್ಸರಿಯ ಹೆಸರಿನಲ್ಲಿ ಯಾರೋ ಅಪರಿಚಿತರು ಹಣ ವಸೂಲಿ ಮಾಡಿ ನರ್ಸರಿ ಗಿಡಗಳನ್ನು ಒದಗಿಸುವುದಾಗಿ ನಂಬಿಸಿ ಮಂಗಳೂರಿನ ವ್ಯಕ್ತಿಗೆ ಮೋಸ ಮಾಡಿರುವ ಘಟನೆ ನಡೆದಿದೆ.

ಈ ಕುರಿತು ಆಕಾಶ್ ನರ್ಸರಿ ಯ ಮಾಲಕರು ಪ್ರಕಟಣೆ ನೀಡಿದ್ದು ನಮ್ಮ ಸಂಸ್ಥೆಯ ಯಾವುದೇ ವ್ಯಕ್ತಿಗಳು ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದಿಲ್ಲ. ಈ ಮೋಸದ ಜಾಲದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ನಾವು ನಿಖರವಾಗಿ ಧನ್ವಂತರಿ ಆಸ್ಪತ್ರೆಯ ಬಳಿ ಹಾಗೂ ಪಂಜಳ ಎಂಬಲ್ಲಿ ಮಾತ್ರವೇ ವ್ಯವಹಾರಿಸುತ್ತಿದ್ದೇವೆ. ಯಾವುದೇ ಗಾಡಿಗಳಲ್ಲಿ ವ್ಯವಹಾರ ಮಾಡುವುದಿಲ್ಲ. ಸಾರ್ವಜನಿಕರು ಇದನ್ನು ಗಮನಿಸಿ ಜಾಗರೂಕರಾಗಿಬೇಕು ಎಂದು ತಿಳಿಸಿದ್ದಾರೆ.
