ವಿಟ್ಲದಲ್ಲಿ ಅಯೋಧ್ಯಾ ಮೆನ್ಸ್ ಗ್ಯಾಲರಿ ಬಟ್ಟೆ ಅಂಗಡಿ ತೆರೆದು ಎರಡು ವರ್ಷಗಳ ತರುವಾಯ ಇದೀಗ ನೂತನವಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ ಈ ಬಟ್ಟೆ ಮಳಿಗೆಯನ್ನು ವಿಟ್ಲ ಪೇಟೆಯ ಹೃದಯಭಾಗದಲ್ಲಿ ತೆರೆಯಲು ತಯಾರಾಗಿದ್ದಾರೆ.
ವಿಟ್ಲ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನೂತನವಾಗಿ ಸೆಪ್ಟೆಂಬರ್ 6 ಸೋಮವಾರದಂದು ಬೆಳಿಗ್ಗೆ10ಕ್ಕೆ ಶುಭಾರಂಭಗೊಳ್ಳಲಿದೆ.
ಈ ಕಾರ್ಯಕ್ರಮವನ್ನು ಧಾರ್ಮಿಕ ಮುಖಂಡರಾದ ಕುಂಟಾರು ರವೀಶ್ ತಂತ್ರಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಪುತ್ತೂರು ವಿಧಾನಸಭಾ ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಉದ್ಯಮಿ ಹರೀಶ್ ನಾಯಕ್ ವಿಟ್ಲ, ಮೈತ್ರೇಯಿ ಗುರುಕುಲಮ್ ನ ಜಗನ್ನಾಥ್ ಕಾಸರಗೋಡು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕೃಷ್ಣಯ್ಯ ವಿಟ್ಲ ಅರಮನೆ, ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅರುಣ್ ವಿಟ್ಲ, ದೈವಪಾತ್ರಿ, ಪತ್ರಕರ್ತ ಹಾಗೂ ಫ್ಯಾಷನ್ ಕೊರಿಯೋಗ್ರಾಫರ್ ಸನಿದ್ ಪೂಜಾರಿ, ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ವಿಟಿವಿ ಸಂಪಾದಕ ರಾಮದಾಸ್ ಶೆಟ್ಟಿ ವಿಟ್ಲ, ಬಂಟ್ವಾಳ ತಾಲೂಕು ಯುವ ಮೋರ್ಚದ ಉಪಾಧ್ಯಕ್ಷ ವಿನೋದ್ ಕರೋಪಾಡಿ,ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ, ಉದ್ಯಮಿ ರಾಮಯ್ಯ ಶೆಟ್ಟಿ ವಿಟ್ಲ ಇವರುಗಳು ಭಾಗವಹಿಸಲಿದ್ದಾರೆ.
ತಾವೆಲ್ಲರೂ ಈ ಶುಭ ಸಮಾರಂಭಕ್ಕೆ ಆಗಮಿಸಿ ಸಹಕರಿಸಿ,ಮುಂದೆಯೂ ಜನರ ಸಹಕಾರ ಪ್ರೋತ್ಸಾಹ ಹೀಗೆ ಇರಲಿಎಂದು ಅಯೋಧ್ಯಾ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.