Advertisement
Advertisement
Advertisement
Advertisement
Advertisement
ಬ್ಲಾಕ್ ಮಟ್ಟದಲ್ಲಿ ಪಕ್ಷದ ಸಂಘಟಣೆಯ ಉಸ್ತುವಾರಿ ನೋಡಿ ಕೊಳ್ಳಲು ಪ್ರತಿ ಬ್ಲಾಕ್ ಗೆ ಸಂಯೋಜಕರನ್ನು ಜಿಲ್ಲಾ ಕಾಂಗ್ರೆಸ್ ನೇಮಿಸಿದ್ದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈ ಬ್ಲಾಕ್ ಸಂಯೋಜಕರ ಸಭೆಯು ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
Advertisement
Advertisement
ಈ ಸಭೆಯಲ್ಲಿ ಜಿಲ್ಲೆಯ ಪ್ರತಿಯೊಂದು ಬ್ಲಾಕ್ ನಲ್ಲಿ ನಡೆಯುತ್ತಿರುವ ಪಕ್ಷ ಸಂಘಟಣೆ ಕೆಲಸ ಕಾರ್ಯಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಯಿತು, ಸಹಾಯ ಹಸ್ತ ಕಾರ್ಯಕ್ರಮದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಅಧ್ಯಕ್ಷರು ಕೆಲವು ಬ್ಲಾಕ್ ಗಳಲ್ಲಿ ಪ್ರಗತಿ ಕುಂಟಿತ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷರು ಸಹಾಯ ಹಸ್ತ ಕಾರ್ಯಕ್ರಮದ ಪ್ರಗತಿಯಲ್ಲಿ ಪುತ್ತೂರು ಬ್ಲಾಕ್ ಪ್ರಥಮ ಸ್ಥಾನದಲ್ಲಿದೆ, ಪುತ್ತೂರು ಬ್ಲಾಕ್ ನವರು ಮಾಡಿದಂತೆ, ಎಲ್ಲಾ ಬ್ಲಾಕ್ ಕಾಂಗ್ರೆಸ್ ನವರು ಸಹಾಯ ಹಸ್ತದ ಕೆಲಸವನ್ನು ಒಂದು ವಾರದ ಒಳಗೆ ಮಾಡಿ ಮುಗಿಸ ಬೇಕೆಂದರು.
Advertisement
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ, ಬೆಳ್ತಂಗಡಿ ನಗರ ಬ್ಲಾಕ್ ನ ಸಂಯೋಜಕರಾಗಿರುವ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ರಾದ ಎಚ್ ಮಹಮ್ಮದ್ ಆಲಿ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ :ರಾಜರಾಮ್, ಬೆಳ್ತಂಗಡಿ ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಗೌಡ, ಪುತ್ತೂರು ಬ್ಲಾಕ್ ನ ಸಂಯೋಜಕ ನ್ಯಾಯವಾದಿ ಮನುರಾಜ್ ಎಂ ಪಿ, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜ, ಜಿಲ್ಲಾ ಸಂಯೋಜಕರಾದ ಶುಭೋದಯ ಆಳ್ವ, ಶ್ರೀಮತಿ ಶಾಲೆಟ್ ಪಿಂಟೋ, ಮಾಜಿ ಜಿ ಪ ಸದಸ್ಯೆ ಶ್ರೀಮತಿ ಮಮತ ಗಟ್ಟಿ, ಪುತ್ತೂರು ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಝೀರ್, ವಿವಿಧ ಬ್ಲಾಕ್ ನ ಅಧ್ಯಕ್ಷರುಗಳು, ಬ್ಲಾಕ್ ಸಂಯೋಜಕರುಗಳು ಉಪಸ್ಥಿತರಿದ್ದರು
Advertisement
Advertisement
Advertisement