ಪುತ್ತೂರು: ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಮತ್ತು ಬಡವರ ಸೇವಕರು ತಂಡದ ಆಗಸ್ಟ್ ತಿಂಗಳ 2021 ರ ಸೇವಾ ಯೋಜನೆಯಲ್ಲಿ ಗುರುತಿಸಿದ ನರಿಮೊಗರು ಗ್ರಾಮದ ಪುರುಷ ಕಟ್ಟೆ ನಿವಾಸಿಯಾಗಿರುವ ಪುನೀತ್ ಬಡಕುಟುಂಬದಲ್ಲಿ ಹುಟ್ಟಿ ಕುಟುಂಬಕ್ಕೆ ಆಧಾರಸ್ತಂಭವಾಗಿ,ತನ್ನ ಕುಟುಂಬದ ಜವಾಬ್ದಾರಿ ನಡೆಸುವ ಪ್ರಾಯದಲ್ಲಿ ಕ್ಯಾನ್ಸರ್ ಅನಾರೋಗ್ಯಕ್ಕೆ ತುತ್ತಾಗಿ ಸುಮಾರು 3 ಲಕ್ಷ ವೆಚ್ಚ ಖರ್ಚಾಗಿದ್ದು, ಮುಂದಿನ ಚಿಕಿತ್ಸೆಯ ವೆಚ್ಚವನ್ನು ನಿಭಾಯಿಸಲು ಬಡ ಕುಟುಂಬಕ್ಕೆ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ದಾನಿಗಳ ಸಹಕಾರ ದಿಂದ ಒಟ್ಟಾದ 30,000/- ರೂಗಳನ್ನು ಸೆ.2 ರಂದು ಹಸ್ತಾಂತರ ಮಾಡಲಾಯಿತು.

ಅದೇ ರೀತಿ ಶಾಂತಿಗೊಡು ಗ್ರಾಮದ ಅನಡ್ಕ ಎಂಬಲ್ಲಿ ವಾಸಿಸುತ್ತಿರುವ ಮಕ್ಕಳಿಲ್ಲದೆ ಪರಿತಪಿಸುವ ಕೃಷ್ಣ ನಾಯಕ್ ವಯೋ ವೃದ್ಧ ಕುಟುಂಬಕ್ಕೆ ಆಗಸ್ಟ್ ತಿಂಗಳ ದಿನಸಿ ಸಾಮಾನುಗಳ ಮೊತ್ತ:1,500/- ನೀಡಿದರು.

ಈ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್,ಶಿವಕುಮಾರ್ ಮರಕ್ಕೂರು,ಪ್ರಜ್ಞಾ ಓಡಿನ್ಲಾಳ,ಹೊನ್ನಪ್ಪ ಪೂಜಾರಿ ಕೈಂದಾಡಿ,ಬೇಬಿ ಋತ್ವಿ,ಪ್ರಭಾತ್, ಚಂದ್ರಶೇಖರ್ ಪೂಜಾರಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.