ಪುತ್ತೂರು: 2013-2014 ರಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ನಿಂದ ಹಂಚಿಕೆಯಾದ ನಿವೇಶನಗಳ ಗಡಿ ಗುರುತು ಮಾಡುವಂತೆ ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ರಮೇಶ್ ಕೆ ರವರಲ್ಲಿ ಮನವಿ ಸಲ್ಲಿಸಿದರು.

2013-2014 ರಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ನಿಂದ ಗ್ರಾಮದ ನಿವೇಶನ ರಹಿತ 29 ಫಲಾನುಭವಿಗಳಿಗೆ ನಿವೇಶನವನ್ನು ನೀಡಲಾಗಿದ್ದು, ಅವರಿಗೆ ಹಕ್ಕು ಪತ್ರವನ್ನು ನೀಡಲಾಗಿದೆ. ಆದರೇ 8 ವರ್ಷಗಳಿಂದ ಇದುವರೆಗೆ ಆ ಫಲಾನುಭವಿಗಳಿಗೆ ತಮ್ಮ ನಿವೇಶನದ ಗಡಿ ಗುರುತನ್ನು ಮಾಡಿರುವುದಿಲ್ಲ. 10 ದಿನಗಳ ಒಳಗೆ ಸರ್ವೆ ಕಾರ್ಯ ನಡೆಸಿ ಫಲಾನುಭವಿಗಳಿಗೆ ಗಡಿ ಗುರುತು ಮಾಡಿ ನಿವೇಶನವನ್ನು ಒದಗಿಸಬೇಕು ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಫಲಾನುಭವಿಗಳ ಜೊತೆ ಸೇರಿಕೊಂಡು ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ, ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾದ ಜಗನ್ನಾಥ ಶೆಟ್ಟಿ ನಡುಮನೆ, ಪುತ್ತೂರು ತಾಲ್ಲೂಕು ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ವಲಯ ಕಾಂಗ್ರೆಸ್ ನ ಕಾರ್ಯದರ್ಶಿ ಯೊಗೀಶ್ ಸಾಮಾನಿ ಸಂಪಿಗೆದಡಿ, ಕೋಡಿಂಬಾಡಿ 1ಬೂತ್ ಅಧ್ಯಕ್ಷರಾದ ಪ್ರಭಾಕರ್ ಸಾಮಾನಿ ಮಠಂತಬೆಟ್ಟು , ಕೋಡಿಂಬಾಡಿ 2 ಬೂತ್ ಕಾರ್ಯದರ್ಶಿಯಾದ ರವಿಕುಮಾರ್ ಮರ್ದನಲಿಕೆ ಉಪಸ್ಥಿತರಿದ್ದರು.



























