ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಜತ್ತೂರು ಗ್ರಾಮದ ಬೂತ್-45 ಸಮಿತಿ ಅಧ್ಯಕ್ಷರಾದ ದೇರಣ್ಣ ಗೌಡ ಓಮಂದೂರು ಅವರ ಮನೆಯಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಭಾಗವಹಿಸಿದರು.

ದೇರಣ್ಣ ಗೌಡ ರವರ ಮನೆಗೆ ನಾಮ ಫಲಕ ಅಳವಡಿಸುವ ಮೂಲಕ ನಾಮಫಲಕ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, 25 ವರ್ಷಗಳಿಂದ ಚುನಾವಣೆಯಲ್ಲಿ ಪಂಚಾಯತ್, ತಾಲೂಕು ಪಂಚಾಯತ್ ಗಳಲ್ಲಿ ಬಿಜೆಪಿಯೇ ಆಡಳಿತವನ್ನು ನಡೆಸಿಕೊಂಡು ಬರುತ್ತಿರುವಂತಹ ಬಜತ್ತೂರು, ಕಾಂಚನಾ, ಹೊಸಗದ್ದೆ ಬೂತ್ ನಿಂದ ಈ ಕಾರ್ಯಕ್ರಮವನ್ನು ಪ್ರಾರಂಭ ಮಾಡುತ್ತಿರುವ ಮೂಲಕ ಇನ್ನೂ 25 ವರ್ಷಗಳ ಕಾಲ ಪುತ್ತೂರಿನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತದೆ ಎನ್ನುವಂತಹ ಸಂದೇಶವನ್ನು ನೀಡುತ್ತಿದ್ದೇವೆ ಎಂದರು.