ಪುತ್ತೂರು: ಕ್ಷೇತ್ರ ಶಿಕ್ಷಣ ಇಲಾಖೆ ಪುತ್ತೂರು ಹಾಗೂ ಆರೋಗ್ಯ ಇಲಾಖೆ ಪುತ್ತೂರು ಸಹಭಾಗಿತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ತಾಲೂಕು ಮಟ್ಟದ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ರೋಟರಿ ಮನೀಶಾ ಹಾಲಿನಲ್ಲಿ ಜರುಗಿತು.
ಹೊಸ ವರ್ಷದ ಆಗಮಕ್ಕೆ ತೆರೆದುಕೊಳ್ಳುವ ಯುವ ಮನಸುಗಳಿಗೆ ಹೊಸ ಚಿಂತನೆಯೊಂದಿಗೆ ಹೊಸ ವರ್ಷ ವಿಚಾರದಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕರಾದ ಡಾ ರಾಜೇಶ್ ಬೆಜ್ಜಂಗಳ ಅವರಿಂದ ಉಪನ್ಯಾಸ ಕಾರ್ಯಾಗಾರ ನಡೆಯಿತು.ಕಾರ್ಯಕ್ರಮದ ಕೇಂದ್ರಬಿಂದು ಎನ್ನುವಂತೆ ಕೊರೋನಾ ಕಲಿಸಿದ ಜೀವನ ಪಾಠ ವಿಚಾರದಲ್ಲಿ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ವಿನ್ಸ್ ಚೇರ್ಮನ್ ಮತ್ತು ಕಾರ್ಯಕ್ರಮ ಸಂಯೋಜಕರಾದ ಸೌಮ್ಯ ಎಂ ಯು ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಪಿ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಹಿರಿಯ ವೈದ್ಯಾಧಿಕಾರಿಗಳಾದ ಡಾ ಅಶೋಕ್ ಕುಮಾರ್ ರೈ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಕ್ಷೇತ್ರ ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್, ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ರೊ ರತ್ನಾಕರ್ ರೈ, ಪುತ್ತೂರು ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷರಾದ ಡಾ ಹರ್ಷ ಕುಮಾರ್ ರೈ, ಕಾರ್ಯದರ್ಶಿ ಉಮೇಶ್ ನಾಯಕ್, ಕಾರ್ಯದರ್ಶಿ ಉಮೇಶ್ ನಾಯಕ್ ಸೇರಿ ಹಲವು ಗಣ್ಯರು, ಸ್ಪರ್ಧಾ ವಿಜೇತರು ಉಪಸ್ಥಿತರಿದ್ದರು.