ಮುಂಡೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶರ್ಮಿಳಾ ರಮೇಶ ನಾಡಜೆ ಯವರನ್ನು ಶಾಲು ಹಾಕಿ ಸ್ಮರಣಿಕೆ ಮತ್ತು ಪುಸ್ತಕ ನೀಡಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಸುಮಾರು 20 ವರ್ಷದಿಂದ ಅತ್ಯಂತ ಪ್ರಾಮಾಣಿಕತೆ ಮತ್ತು ಶ್ರದ್ದೆ ಯಿಂದ ಕೆಲಸ ಮಾಡಿ ಜನನುರಾಗಿಯಾಗಿದ್ದರು. ಈ ಭಾಗದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅಂಗನವಾಡಿ ಯಲ್ಲಿ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ಶ್ರಮ ವಹಿಸಿ ಸಾರ್ವಜನಿಕವಾಗಿ ಪ್ರಶಂಸೆ ಪಡೆದಿದ್ದರು.

ಸನ್ಮಾನ ಕಾರ್ಯಕ್ರಮ ವನ್ನು ಮುಂಡೂರು ಮತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀ ಬಾಲಚಂದ್ರ ಗೌಡ ಕಡ್ಯ ಹಾಗೂಮುಂಡೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಅನಿಲ್ ಕಣ್ಣರ್ನೂಜಿ ಮತ್ತು ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್, ಶಾಲು ಹಾಕಿ, ಸ್ಮರಣಿಕೆ ಮತ್ತು ಪುಸ್ತಕ ನೀಡಿ ಗೌರವ ಸಲ್ಲಿಸಿದರು.