ಪುತ್ತೂರು: ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ನೂತನ ಅಧ್ಯಕ್ಷರಾದ ಮಹಾಲಿಂಗ ನಾಯ್ಕ್ ನರಿಮೊಗರು ರವರು ಎಸ್ ಟಿ ಘಟಕವನ್ನು ಬಲ ಪಡಿಸುವ ಉದ್ದೇಶದಿಂದ ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೋಟೆ ಬಾಬು ರೈ, ಬೆಟ್ಟಂಪಾಡಿ ಕಾಂಗ್ರೆಸ್ ಮುಖಂಡ ರವಿ ರೈ ಕಟ್ಟಿಳ್ತಡ್ಕ, ಪಾಣಾಜೆ ಗ್ರಾ.ಪಂ. ಸದಸ್ಯರಾದ ನಾರಾಯಣ ನಾಯಕ್ ರವರೊಂದಿಗೆ ಪಕ್ಷ ಸಂಘಟಣೆಯ ಬಗ್ಗೆ ಸಮಾಲೋಚನೆ ನಡೆಸಿದರು.
ಬಳಿಕ ಸ್ಥಳೀಯ ಮುಖಂಡರೊಂದಿಗೆ ಮಾಜಿ ಪಂಚಾಯತ್ ಸದಸ್ಯ ಶಿವಪ್ಪ ನಾಯ್ಕ್ ಮುಂದಿತಡ್ಕ, ಪಾಣಾಜೆ ಪಂಚಾಯತ್ ಸದಸ್ಯೆ ವಿಮಲಾ ನಾಯ್ಕ್, ನಾರಾಯಣ ನಾಯ್ಕ್ ಸುರಂಬೈಲ್ ನಡುಮನೆ,ಪಾಣಾಜೆ ಗುರಿಕಿಲು ನಿವಾಸಿ ರಮೇಶ್ ರವರುಗಳ ಮನೆಗಳಿಗೆ ತೆರಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಬಲವರ್ಧನೆಗೆ ಸಹಕಾರ ಕೋರಿದರು.






























