ಪುತ್ತೂರು ನಗರಸಭೆಯ ವಾರ್ಡ್ ಸಂಖ್ಯೆ 8ರ ತಾರಿಗುಡ್ಡೆ ಪರಿಸರದಲ್ಲಿ ಅಭಿವೃದ್ಧಿಯು ನಿಧಾನಗತಿಯಲ್ಲಿದ್ದು, ಬೇರೆ ವಾರ್ಡ್ ಗಳಿಗೆ ಹೋಲಿಸಿದರೆ ತಾರಿಗುಡ್ಡೆ ಪರಿಸರವು ತೀರಾ ಹಿಂದುಳಿದಿದ್ದು ಸರಿಯಾದ ರಸ್ತೆ ಸಂಪರ್ಕವೂ ಆಗಿರುವುದಿಲ್ಲ. ಸಾರ್ವಜನಿಕರ ಪರವಾಗಿ ಸ್ಥಳೀಯ ಸೌಹಾರ್ದ ಯುವಕ ಸಮಿತಿ (ರಿ)ಯು ಹಲವಾರು ವರ್ಷಗಳಿಂದ ನಿರಂತರವಾಗಿ ಪುತ್ತೂರು ನಗರ ಸಭೆಗೆ ರಸ್ತೆ ನಿರ್ಮಿಸಿ ಕೊಡುವ ಮನವಿ ಕೊಡುತ್ತಲೇ ಬಂದಿದೆ. ಈ ಬಾರಿಯ ಅನುದಾನದಲ್ಲಿಯಾದರೂ ತಾರಿಗುಡ್ಡೆಗೆ ಮುಖ್ಯ ರಸ್ತೆಯ ಕಾಮಗಾರಿ ಹಾಗೂ ಚರಂಡಿ ವ್ಯವಸ್ಥೆಯನ್ನು ಆದಷ್ಟು ಬೇಗ ನಡೆಸಿಕೊಡಬೇಕು ಎಂದು ಇದರ ಜೊತೆಗೆ ಕೆರೆಮೂಲೆಯಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸಬೇಕೆಂದು ಆಗ್ರಹಿಸಿ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಅವರಿಗೆ ಸೌಹಾರ್ದ ಯುವಕ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. .
ಮನವಿಗೆ ಅಧ್ಯಕ್ಷ ಜೀವಂಧರ್ ಜೈನ್ ಸ್ಪಂದಿಸುವ ಭರವಸೆ ನೀಡಿದ್ದು, ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ರಾಬಿನ್ ತಾವ್ರೊ, ತೌಹಿದ್, ನಝೀರ್, ನೆಲ್ಸನ್, ರಿಯಾಝ್, ನವಾಝ್ ತಾರಿಗುಡ್ಡೆ, ರೋಹಿತ್, ಚಿದನ್, ರವಿ, ಪ್ರಸಾದ್ ರೈ ಕೆರೆಮೂಲೆ, ನವೀನ್ ರೈ, ಸುಂದರ್, ಇಸ್ಮಾಯಿಲ್ ಜನರಲ್ ಸ್ಟೋರ್, ಲಿಲ್ಲಿ ಡಿಸೋಜ, ಇಬ್ರಾಹಿಂ, , ಸೌಹಾರ್ದ ಯುವಕ ಸಮಿತಿಯ ಅಧ್ಯಕ್ಷ ಮಹಮ್ಮದ್ ತಾರಿಗುಡ್ಡೆ ಸೇರಿ ಹಲವರು ಉಪಸ್ಥಿತರಿದ್ದರು.